SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದೇವರ ಹೆಸರಿನಲ್ಲಿ ಅಪಚಾರ ಮಾಡಿದರೆ ಶಿಕ್ಷೆ ಕಾಯಂ : V ಸೋಮಣ್ಣ

ದೇವರ ಹೆಸರಿನಲ್ಲಿ ಅಪಚಾರ ಮಾಡಿದರೆ ಶಿಕ್ಷೆ ಕಾಯಂ : V ಸೋಮಣ್ಣ

0
50

ದಾವಣಗೆರೆ: ದೇವರ ಹೆಸರನ್ನು ಬಳಸಿಕೊಂಡು ಯಾರಾದರೂ ಪಾಪದ ಕೆಲಸಗಳನ್ನು ಮಾಡಿದರೆ, ಅವರಿಗಿಂತ ದೊಡ್ಡ ಪಾಪಿಗಳು ಈ ಜಗತ್ತಿನಲ್ಲಿ ಮತ್ತಾರೂ ಇಲ್ಲ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವಂತನ ಹೆಸರಿನಲ್ಲಿ ಅಪಚಾರ ಅಥವಾ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಶ್ರೀ ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಈಗಾಗಲೇ ವಿಶೇಷ ತನಿಖಾ ತಂಡದ (SIT) ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಚಿತ್ರಕಥೆಯ ಮಾಂತ್ರಿಕ, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ಇನ್ನಿಲ್ಲ

“ರಾಮನ ಹೆಸರನ್ನು ಹೇಳಿಕೊಂಡು ಯಾರಾದರೂ ಅಪಚಾರ ಮಾಡಲು ಯತ್ನಿಸಿದರೆ, ಅಂತಹವರಿಗೆ ತಕ್ಷಣವೇ ತಕ್ಕ ಶಿಕ್ಷೆಯಾಗುವಂತೆ ಸ್ವತಃ ಶ್ರೀರಾಮನೇ ಸೃಷ್ಟಿ ಮಾಡುತ್ತಾನೆ. ಇಂತಹ ಪ್ರಕರಣಗಳಲ್ಲಿ ಯಾರನ್ನೂ ಕ್ಷಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,” ಎಂದು ಅವರು ಹೇಳಿದರು.

ದೇವರ ಹೆಸರನ್ನು ಬಳಸಿಕೊಂಡು ಜನರ ನಂಬಿಕೆಗೆ ಧಕ್ಕೆ ತರುವಂತಹ ಕೃತ್ಯಗಳು ಖಂಡನೀಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಭೀಕರ ಅಪಘಾತ: ಮಂತ್ರಾಲಯ ಯಾತ್ರೆ ಹೊರಟಿದ್ದ ನಾಲ್ವರು ಸಾವು!

ಇದೇ ವೇಳೆ ರೈಲ್ವೆ ಇಲಾಖೆಯ ಯೋಜನೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರೈಲ್ವೆ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಸಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳು ಮತ್ತು ಹೊಸ ಯೋಜನೆಗಳನ್ನು ಜನರು ಕಾಣಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.