SK Home Ad
Home ಸಿನಿ ಮಿಲ್ಸ್ ಮಗ ಯಾತ್ರಾ ಸಿನಿಮಾಗೆ ತಂದೆ ಧನುಶ್ ಡೈರೆಕ್ಷನ್: ಬೆಳ್ಳಿಪರದೆಗೆ ಎಂಟ್ರಿ ಕೊಡಲು ಸಜ್ಜಾದ ಸ್ಟಾರ್ ಕಿಡ್!

ಮಗ ಯಾತ್ರಾ ಸಿನಿಮಾಗೆ ತಂದೆ ಧನುಶ್ ಡೈರೆಕ್ಷನ್: ಬೆಳ್ಳಿಪರದೆಗೆ ಎಂಟ್ರಿ ಕೊಡಲು ಸಜ್ಜಾದ ಸ್ಟಾರ್ ಕಿಡ್!

0
11

ಚೆನ್ನೈ: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ, ಸೂಪರ್‌ಸ್ಟಾರ್ ಧನುಶ್ ಸದ್ಯದಲ್ಲೇ ತಮ್ಮ ಹಿರಿಯ ಮಗ ಯಾತ್ರಾ ಬೆಳ್ಳಿಪರದೆಗೆ ಪರಿಚಯಿಸಲು ಸಜ್ಜಾಗಿದ್ದಾರೆ. ನಟನೆಯ ಜೊತೆಗೆ ಯಶಸ್ವಿ ನಿರ್ದೇಶಕರೂ ಆಗಿರುವ ಧನುಶ್, ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ್ದು, ಈಗ ಮಗನ ಚೊಚ್ಚಲ ಚಿತ್ರಕ್ಕೂ ತಾವೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ಮಕ್ಕಳು ಚಿತ್ರರಂಗಕ್ಕೆ ಬರಲು ಇನ್ನು ಸಮಯವಿದೆ ಎಂದಿದ್ದ ಧನುಶ್, ಈಗ 20 ವರ್ಷದ ಮಗನಿಗಾಗಿ ಖುದ್ದು ಕಥೆ ಸಿದ್ಧಪಡಿಸುತ್ತಿದ್ದಾರೆ.

ಹಾಗೇ ಧನುಶ್ ನಿರ್ದೇಶಿಸಲಿರುವ ಈ ಹೊಸ ಸಿನಿಮಾವು ಶಾಲಾ-ಕಾಲೇಜು ಜೀವನದ ಹಿನ್ನೆಲೆಯನ್ನು ಹೊಂದಿರಲಿದ್ದು, ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕಥೆಗೆ ಸೂಕ್ತವಾಗಿ ಹೊಂದುವುದರಿಂದಲೇ ಮಗ ಯಾತ್ರಾರ ಮುಖ್ಯ ಪಾತ್ರಕ್ಕೆ ಧನುಶ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಸಂಗೀತ ನೀಡುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಧನುಶ್ ತಮ್ಮ ಸೋದರಳಿಯ ಪವಿಶ್‌ರನ್ನು ‘ನಿಲವುಕ್ಕು ಎನ್ಮೆಲ್ ಎನ್ನದಿ ಕೋಪಂ’ ಸಿನಿಮಾ ಮೂಲಕ ಪರಿಚಯಿಸಿದ್ದರು, ಇದೀಗ ಮಗನ ಸರದಿಯಾಗಿದೆ.

ಅಲ್ಲದೇ.. ವೈಯಕ್ತಿಕ ಜೀವನದಲ್ಲಿ 2024 ರಲ್ಲಿ ಪತ್ನಿ ಐಶ್ವರ್ಯ ರಜನೀಕಾಂತ್ ವಿಚ್ಛೇದನ ಪಡೆದಿರುವ ಧನುಶ್, ವೃತ್ತಿಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು, ಹಿಂದಿ ಹಾಗೂ ಹಾಲಿವುಡ್‌ನಲ್ಲೂ ಗುರುತಿಸಿಕೊಂಡು ಪ್ರಸ್ತುತ ತಮ್ಮ 55ನೇ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಮಲಯಾಳಂ ನಟ ಮಮ್ಮುಟ್ಟಿ ಕೂಡ ಸಾಥ್ ನೀಡಿದ್ದಾರೆ.

ಇದರ ಜೊತೆಗೆ ಹಿಂದಿಯ ಐತಿಹಾಸಿಕ ಸಿನಿಮಾ, ತೆಲುಗಿನ ಪ್ರಾಜೆಕ್ಟ್ ಹಾಗೂ ಸಹೋದರ ಸೆಲ್ವರಾಘವನ್ ನಿರ್ದೇಶನದ ಬಹುನಿರೀಕ್ಷಿತ ‘ಆಯರತ್ತಿಲ್ ಒರುವನ್ 2’ ಸಿನಿಮಾಗಳು ಧನುಶ್ ಕೈಯಲ್ಲಿದ್ದು, ಇವುಗಳ ನಡುವೆಯೇ ಮಗನ ಸಿನಿಮಾವನ್ನೂ ತಂದೆ ಧನುಷ್ ಆರಂಭಿಸಲಿದ್ದಾರೆ.