SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆಯಲ್ಲಿ ಯಶಸ್ ಆಕ್ಷೇಪಾರ್ಹ ಮಾತು: ವೀಕ್ಷಕರ ಆಕ್ರೋಶ; ರೆಡ್ ಕಾರ್ಡ್‌ಗೆ ಆಗ್ರಹ!

ಬಿಗ್ ಬಾಸ್ ಮನೆಯಲ್ಲಿ ಯಶಸ್ ಆಕ್ಷೇಪಾರ್ಹ ಮಾತು: ವೀಕ್ಷಕರ ಆಕ್ರೋಶ; ರೆಡ್ ಕಾರ್ಡ್‌ಗೆ ಆಗ್ರಹ!

0
19

BBK13: ‘ಬಿಗ್ ಬಾಸ್ ಕನ್ನಡ 13’ ರಿಯಾಲಿಟಿ ಶೋನಲ್ಲಿ ಅಸಭ್ಯ ಹಾಗೂ ಆಕ್ಷೇಪಾರ್ಹ ಪದಗಳ ಬಳಕೆ ಮುಂದುವರಿದಿದ್ದು, ಈ ಬಾರಿ ಸ್ಪರ್ಧಿ ಯಶಸ್ ಗೌಡ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಹಿಂದೆ ಕೆಟ್ಟ ಪದ ಬಳಕೆಗಾಗಿ ಜಗದೀಶ್ ಮತ್ತು ಮಂಜು ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಆದಾಗ್ಯೂ, ಸ್ಪರ್ಧಿಗಳು ಎಚ್ಚೆತ್ತುಕೊಳ್ಳದಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸ್ತುತ ಮನೆಯಲ್ಲಿ ನಡೆಯುತ್ತಿರುವ ‘ಶೆಟ್ಟಿ ಡಾನ್ ಮದುವೆ’ ಫನ್ ಟಾಸ್ಕ್ ವೇಳೆ, ವರನ ಪಾತ್ರಕ್ಕಾಗಿ ಸ್ಪರ್ಧಿಸುತ್ತಿದ್ದ ಗಗನ್ ಚಿನ್ನಪ್ಪ ಮತ್ತು ಯಶಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಜಗಳದ ನಡುವೆ ಯಶಸ್, ಗಗನ್ ವಿರುದ್ಧ ‘ಒಂಬತ್ತು’ ಎಂಬ ತೃತೀಯ ಲಿಂಗಿಗಳನ್ನು ಅಪಹಾಸ್ಯ ಮಾಡುವ ಮತ್ತು ಕೀಳಾಗಿ ಕಾಣುವ ಪದ ಬಳಸಿರುವುದು ಭಾರಿ ವಿವಾದ ಸೃಷ್ಟಿಸಿದೆ. ಇದಲ್ಲದೆ ಸೌಂದರ್ಯ ಅವರ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮನೆಯೊಳಗೆ ಪದೇ ಪದೇ ’18+’ ಜೋಕ್‌ಗಳನ್ನು ಮಾಡುತ್ತಿರುವ ಯಶಸ್ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್‌ಜಿಬಿಟಿಕ್ಯೂ (LGBTQ+) ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಯಶಸ್ ಅವರನ್ನು ತಕ್ಷಣವೇ ರೆಡ್ ಕಾರ್ಡ್ ನೀಡಿ ಎಲಿಮಿನೇಟ್ ಮಾಡಬೇಕೆಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ. ವಾಹಿನಿಯು ಯಶಸ್ ಅವರ ತಪ್ಪುಗಳನ್ನು ಮುಚ್ಚಿಹಾಕದೆ, ಈ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.