SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಸುಟ್ಟು ಕರಕಲಾದ ಮೃತದೇಹ ಪತ್ತೆ: ಪ್ರಕರಣ ದಾಖಲು

ಸುಟ್ಟು ಕರಕಲಾದ ಮೃತದೇಹ ಪತ್ತೆ: ಪ್ರಕರಣ ದಾಖಲು

0
62

ಕೊಪ್ಪಳ (ಕನಕಗಿರಿ): ಕನಕಗಿರಿ ಪಟ್ಟಣದ 5ನೇ ವಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೂರನೇ ಮಹಡಿಯಲ್ಲಿ ಸುಟ್ಟು ಕರಕಲಾಗಿರುವ ಮಹಿಳೆಯ ದೇಹವೊಂದು ಪತ್ತೆಯಾಗಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತರು ಮಹಿಳೆಯನ್ನು ಕೊಲೆ ಮಾಡಿ, ಮಾಡಿದ ಕೊಲೆಗೆ ಸುಳಿವು ಸಿಗದಂತೆ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ತನಿಖಾಧಿಕಾರಿ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು ಮಹಿಳೆಯ ಮುಖ, ದೇಹ ಸಂಪೂರ್ಣವಾಗಿ ಸುಟ್ಟು ಕರಲಾಗಿದೆ.

ಹೋಟೆಲ್ ಮಾಲೀಕ ಸಂಗನಗೌಡ ಎಂಬುವವರು ಸ್ಥಳೀಯ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ. “ಇಲ್ಲಿನ 5ನೇ ವಾರ್ಡ್‌ನಲ್ಲಿ ಕಳೆದ ಎರಡು ವರ್ಷದಿಂದ ಮನೆ ಕಟ್ಟಡ ನಿರ್ಮಿಸುತ್ತಿದ್ದು ಸೋಮವಾರ ರಾತ್ರಿ ವೇಳೆಯಲ್ಲಿ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿಯುವುದು ಕಂಡು ಬಂದಿದೆ. ಹಾಗಾಗಿ ಸ್ಥಳಕ್ಕೆ ನಾನೊಬ್ಬನೆ ತೆರಳಿ ನೋಡಿದಾಗ 30 ವರ್ಷದ ವಯಸ್ಸಿನ ಮಹಿಳೆಯ ಮೃತದೇಹಕ್ಕೆ ಬೆಂಕಿ ಹತ್ತಿರುವುದು ಕಂಡು ಬಂದಿದೆ” ಎಂದು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.