Home Advertisement
Home ಅಪರಾಧ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ: ಐವರ ದುರ್ಮರಣ

ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ: ಐವರ ದುರ್ಮರಣ

0
132

ಗದಗ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಐದು ಜನ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜಿಲ್ಲೆಯ ನರೇಗಲ್ ಹೋಬಳಿ ಬಳಿ ಬೆಳಗ್ಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾದನಹಿಪ್ಪರಗಿ ಮೂಲದ ಈ ಐವರು ಕಲಬುರಗಿಯಿಂದ ಶಿರಹಟ್ಟಿ ಫಕ್ಕೀರೇಶ್ವರ ಮಠಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿ ಸಾವನ್ನಪ್ಪಿದ್ದಾರೆ.
ಈ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಗುರುತನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿದ್ದು ಮಾದನ ಹಿಪ್ಪರಗಿ ಗ್ರಾಮದ ಕತ್ತಿ ಮತ್ತು ಕಲಶೆಟ್ಟಿ ಕುಟುಂಬದ ಸಚಿನ್ ಕತ್ತಿ(31), ಶಿವಕುಮಾರ್ ಕಲಶೆಟ್ಟಿ(51) ಚಂದ್ರಲಕಾ ಕಲಶೆಟ್ಟಿ (42) ರಾಣಿ ಕಲಶೆಟ್ಟಿ (32) ದ್ರಾಕ್ಷಾಯಿಣಿ ಕತ್ತಿ(33) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ದುರಂತದಲ್ಲಿ ಸಾವನ್ನಪ್ಪಿದವರು ಶಿರಹಟ್ಟಿ ಫಕೀರೇಶ್ವರ ದಿಂಗಾಲೇಶ್ವರ ಶ್ರೀಗಳ ಭಕ್ತರು ಎಂದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಗೆ ದಾವಿಸಿದ ಫಕೀರ ದಿಂಗಾಲೇಶ ಶ್ರೀಗಳು ಭೇಟಿ ನೀಡಿದ್ದಾರೆ.