Home Advertisement
Home ಕ್ರೀಡೆ IPL 2026: SRHvsMI ಗೆಲುವಿನ ಹಳಿಗೆ ಮುಂಬೈ ಮರಳುವುದೇ?

IPL 2026: SRHvsMI ಗೆಲುವಿನ ಹಳಿಗೆ ಮುಂಬೈ ಮರಳುವುದೇ?

0
67

ಮುಂಬೈ: ಕಳೆದ 5 ಆವೃತ್ತಿಗಳಲ್ಲಿ ಟ್ರೋಫಿ ಗೆಲ್ಲದ ಮುಂಬೈ ಇಂಡಿಯನ್ಸ್ ಈ ಆವೃತ್ತಿಯಲ್ಲೂ ಕಳಪೆ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೆಳಗಿದೆ. ಇದರ ಮಧ್ಯೆ ಇಂದು ಐಪಿಎಲ್ 2026ರ 41ನೇ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.

ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅತಿಥೇಯರು ಕೊಂಚ ಒತ್ತಡದಲ್ಲೇ ಇದ್ದಾರೆ. ಸದ್ಯ ಟೂರ್ನಿಯಲ್ಲಿ ಉಭಯ ತಂಡಗಳ ಪಯಣ ಭಿನ್ನವಾಗಿದೆ.

ಸನ್‌ರೈಸರ್ಸ್ ಹೈದ್ರಾಬಾದ್ ತಂಡವು ಆಡಿರುವ 8 ಪಂದ್ಯಗಳಲ್ಲಿ 5 ಜಯಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ. ಮುಂಬೈ ಇಂಡಿಯನ್ಸ್ 7 ಪಂದ್ಯಗಳಲ್ಲಿ ಕೇವಲ 2 ಜಯದೊಂದಿಗೆ 9ನೇ ಸ್ಥಾನಕ್ಕೆ ಕುಸಿದಿದೆ. ಹಿಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ 103 ರನ್‌ಗಳ ಭಾರಿ ಸೋಲುಂಡಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಈ ಪಂದ್ಯ ಗೆಲುವಿನ ಹಳಿಗೆ ಮರಳಲು ಅನಿವಾರ್ಯವಾಗಿದೆ.

ಮುಂಬೈ ತಂಡಕ್ಕೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಬಲವಾಗಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಪ್ರಮುಖ ಅಸ್ತ್ರವಾಗಿದ್ದಾರೆ.

ಮತ್ತೊಂದೆಡೆ, ಸನ್‌ರೈಸರ್ಸ್ ಪರ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸನ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಹೈದ್ರಾಬಾದ್ ಬೌಲಿಂಗ್ ವಿಭಾಗವೂ ಉತ್ತಮ ಲಯದಲ್ಲಿದೆ.

ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಹೈ-ಸ್ಕೋರಿಂಗ್ ಪಂದ್ಯ ನಿರೀಕ್ಷಿಸಲಾಗಿದೆ. ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಹೈದ್ರಾಬಾದ್ ತಂಡದ ಓಟಕ್ಕೆ ಮುಂಬೈ ತನ್ನ ತವರು ನೆಲದಲ್ಲಿ ಬ್ರೇಕ್ ಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ