ಸಿಡಿಲು ಬಡಿದು ಮಠಕ್ಕೆ ಬೆಂಕಿ: ದೇವರ ಮೂರ್ತಿಗಳು ಹಾನಿ

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು ಗ್ರಾಮದಲ್ಲಿರುವ ಶ್ರೀ ಕೋರಿ ಸಿದ್ದೇಶ್ವರ ಶಾಖಾ ಮಠದಲ್ಲಿ ತಡರಾತ್ರಿ ಸಿಡಿಲು ಬಡಿದ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಮಠದ ಒಳಭಾಗಕ್ಕೆ ಬೆಂಕಿ ತಗುಲಿ, ದೇವರ ಮೂರ್ತಿಗಳು ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಮುದನೂರು ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ್ದು, ಸಿಡಿಲಿನ ಅಘಾತದಿಂದ ಮಠದ ಕಟ್ಟಡಕ್ಕೆ ಬೆಂಕಿ ತಗುಲಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಮಠದ ಒಳಗಿನ ದೇವರ ಮೂರ್ತಿಗಳು ಮತ್ತು ಪೂಜಾ … Continue reading ಸಿಡಿಲು ಬಡಿದು ಮಠಕ್ಕೆ ಬೆಂಕಿ: ದೇವರ ಮೂರ್ತಿಗಳು ಹಾನಿ