SK Home Ad
Home ಕ್ರೀಡೆ IND vs WI: ಭಾರತದ ಬೌಲರ್‌ಗಳನ್ನು ಚಿಂದಿ ಉಡಾಯಿಸಿ ಇತಿಹಾಸ ಬರೆದ ವಿಂಡೀಸ್, 406 ಟಾರ್ಗೆಟ್

IND vs WI: ಭಾರತದ ಬೌಲರ್‌ಗಳನ್ನು ಚಿಂದಿ ಉಡಾಯಿಸಿ ಇತಿಹಾಸ ಬರೆದ ವಿಂಡೀಸ್, 406 ಟಾರ್ಗೆಟ್

0
19

IND vs WI: ಗುವಾಹಟಿಯ ಮೈದಾನದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಅಕ್ಷರಶಃ ರನ್‌ಗಳ ಸುರಿಮಳೆಗೈದಿದ್ದಾರೆ. ಭಾರತದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕ್ರೀಸ್‌ಗೆ ಇಳಿದ ಕೆರಿಬಿಯನ್ ಪಡೆ, ಟೀಂ ಇಂಡಿಯಾ ಬೌಲಿಂಗ್ ವಿಭಾಗವನ್ನು ಸಂಪೂರ್ಣವಾಗಿ ಧೂಳಿಪಟ ಮಾಡಿ ದಾಖಲೆಯ 405 ರನ್ ಕಲೆಹಾಕಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವೆಸ್ಟ್ ಇಂಡೀಸ್ 400 ರನ್‌ಗಳ ಮೈಲಿಗಲ್ಲು ದಾಟಿದ್ದು ಇದೇ ಮೊದಲು.

ಟಾಸ್ ಸೋತು ಮೊದಲು ಬ್ಯಾಟಿಂಗ್‌‌ಗೆ ಇಳಿದ ವೆಸ್ಟ್ ಇಂಡೀಸ್ ತಂಡಕ್ಕೆ ಕೇಸಿ ಕಾರ್ಟಿ (9) ಬೇಗನೆ ನಿರ್ಗಮಿಸಿ ಆರಂಭಿಕ ಆಘಾತ ನೀಡಿದರು. ಆದರೆ ನಂತರ ಶುರುವಾಗಿದ್ದೇ ಅಸಲಿ ರನ್ ಜಾತ್ರೆ. ಜಾನ್ ಕ್ಯಾಂಪ್‌‌ಬೆಲ್ (101) ಮತ್ತು ನಾಯಕ ಶಾಯ್ ಹೋಪ್ (104) ಭಾರತೀಯ ಬೌಲರ್‌ಗಳನ್ನು ಕಂಗೆಡಿಸಿ ಎರಡನೇ ವಿಕೆಟ್‌ಗೆ ಬರೋಬ್ಬರಿ 147 ರನ್‌‌ಗಳ ಜೊತೆಯಾಟ ಕಟ್ಟಿದರು. ಕ್ಯಾಂಪ್‌ಬೆಲ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಅಮೀರ್ ಜಂಗೂ (114) ಇನ್ನಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ ಭಾರತದ ಪಾಲಿಗೆ ಸಿಂಹಸ್ವಪ್ನವಾದರು.

ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದ್ದು ವೆಸ್ಟ್ ಇಂಡೀಸ್ ಪಾಲಿಗೆ ಐತಿಹಾಸಿಕ ಕ್ಷಣವಾಗಿ ಮಾರ್ಪಟ್ಟಿತು. ಈ ಜೋಡಿಯ ಆರ್ಭಟಕ್ಕೆ 40 ಓವರ್ ಮುಗಿಯುವಷ್ಟರಲ್ಲೇ ತಂಡ 320 ರನ್ ದಾಟಿತ್ತು. ಅಂತಿಮವಾಗಿ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 405 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಹಿಂದೆ 2019ರಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ 389 ರನ್‌ಗಳ ದಾಖಲೆಯನ್ನು ವಿಂಡೀಸ್ ಪುಡಿಗಟ್ಟಿತು.

ಭಾರತದ ಪರ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಗುನ್‌ರೂರ್ ಬ್ರಾರ್ ತಲಾ 2 ವಿಕೆಟ್ ಕಬಳಿಸಿದರೂ ರನ್‌ ನಿಯಂತ್ರಿಸಲು ಹೆಣಗಾಡಿದರು. ಶಿಸ್ತುಬದ್ಧ ಲೈನ್-ಲೆಂಗ್ತ್ ಕೊರತೆ ಭಾರತೀಯ ಪಾಳಯಕ್ಕೆ ತೀವ್ರ ಹಿನ್ನಡೆಯನ್ನುಂಟುಮಾಡಿತು.