SK Home Ad
Home ಕ್ರೀಡೆ CSK ಅಭಿಮಾನಿಗಳಿಗೆ ಶಾಕ್‌: ಆರಂಭಿಕ ಪಂದ್ಯಗಳಿಗೆ ಧೋನಿ ಡೌಟ್

CSK ಅಭಿಮಾನಿಗಳಿಗೆ ಶಾಕ್‌: ಆರಂಭಿಕ ಪಂದ್ಯಗಳಿಗೆ ಧೋನಿ ಡೌಟ್

0
267

ಚನ್ನೈ: ಐಪಿಎಲ್‌ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡುವ ಸುದ್ದಿಯೊಂದು ಹೊರಬಿದ್ದಿದೆ.

ಐಪಿಎಲ್​ನ ಆರಂಭಿಕ ಪಂದ್ಯಗಳಿಂದ ಧೋನಿ ಹೊರಗುಳಿಯುವ ಸಾಧ್ಯತೆ ಇದೆ ಎಂದು ಫ್ರಾಂಚೈಸಿ ತಿಳಿಸಿದೆ. ಸದ್ಯ ಕಾಲಿನ ಸ್ನಾಯು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಟಾಟಾ ಐಪಿಎಲ್ 2026ರ ಆರಂಭಿಕ ಪಂದ್ಯಗಳನ್ನು ಧೋನಿ ತಪ್ಪಿಸಿಕೊಳ್ಳಲಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಧೋನಿ ಅವರು ಈಗ ರಿಹ್ಯಾಬಿಲಿಟೇಷನ್ ಪ್ರಕ್ರಿಯೆಯಲ್ಲಿ ಇದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕಿರುವುದರಿಂದ, ಐಪಿಎಲ್ 2026ರ ಮೊದಲ ಎರಡು ವಾರಗಳಲ್ಲಿ ಅವರು ತಂಡದ ಪರವಾಗಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿಸಲಾಗಿದೆ.

ಧೋನಿ ಅವರ ಗೈರುಹಾಜರಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಅವರ ಅನುಭವ ಮತ್ತು ನಾಯಕತ್ವ ತಂಡಕ್ಕೆ ಮಹತ್ವದ್ದಾಗಿದ್ದು, ಅಭಿಮಾನಿಗಳು ಅವರ ಶೀಘ್ರ ಮರಳುವಿಕೆಯನ್ನು ಕಾತರದಿಂದ ಕಾಯುತ್ತಿದ್ದಾರೆ.