ಮುಂಬೈ: ಪ್ಲೇಆಫ್ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ರನ್‌ಗಳಿಸಲು ಮುಂಬೈ ವಿರುದ್ಧ ಪರದಾಡಬೇಕಾಯಿತು.
ನಿಗದಿತ 20 ಓವರ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ 8 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ಟಾಸ್ ಸೋತು ಮೊದಲ ಫೀಲ್ಡಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಲೆಕ್ಕಾಚಾರದಂತೆ ಆರಂಭದಲ್ಲಿಯೇ ರಾಜಸ್ಥಾನ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕಿತು.
ಸ್ಫೋಟಕ ಆರಂಭವನ್ನು ನೀಡಿದ ಯಶಸ್ವಿ ಜೈಸ್ವಾಲ್ 17 ಎಸೆತದಲ್ಲಿ 1 ಬೌಂಡರಿ, 3 ಸಿಕ್ಸರ್‌ನಿಂದ 27 ರನ್ ಗಳಿಸಿ ವಿಲ್ ಜಾಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇವರ ಹಿಂದೆಯೇ ವೈಭವ್ ಸೂರ್ಯವಂಶಿ ಕೇವಲ 4 ರನ್‌ಗಳಿಗೆ ಹೊರನಡೆದರು.
ನಾಯಕ ರಿಯಾನ್ ಪರಾಗ್ (14) ಕೂಡ ಬಹುಬೇಗನೆ ಪೆವಿಲಿಯನ್ ಸೇರಿದರು. 6 ಓವರ್ ಆಗುವಷ್ಟರಲ್ಲಿಯೇ ರಾಜಸ್ಥಾನ್ 54 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ದಾಸುನ್ ಶನಕ (29) ಮತ್ತು ಧ್ರುವ್ ಜುರೆಲ್ (38) ಜೋಡಿ 45 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಇವರ ಬಳಿಕ ಜೋಫ್ರಾ ಆರ್ಚರ್ ಕೇವಲ 15 ಎಸೆತದಲ್ಲಿ 1 ಬೌಂಡರಿ, 3 ಸಿಕ್ಸರ್ ಸೇರಿದಂತೆ 32 ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಅಂತಿಮವಾಗಿ ರವೀಂದ್ರ ಜಡೇಜಾ ಅಜೇಯ 19, ನಾಂದ್ರೆ ಬರ್ಗರ್ 10 ರನ್ ಗಳಿಸಿ ಅಜೇಯರಾಗಿ ಉಳಿದರು.






















