Home Advertisement
Home ಕ್ರೀಡೆ RCB ಫ್ಯಾನ್ಸ್‌ಗೆ ಡಬಲ್‌ ಗುಡ್‌ನ್ಯೂಸ್: ಕ್ವಾಲಿಫೈಯರ್ ಟಿಕೆಟ್ ಪಡೆದ ತಂಡ..! ಇಲ್ಲಿದೆ ಡಿಟೇಲ್ಸ್‌

RCB ಫ್ಯಾನ್ಸ್‌ಗೆ ಡಬಲ್‌ ಗುಡ್‌ನ್ಯೂಸ್: ಕ್ವಾಲಿಫೈಯರ್ ಟಿಕೆಟ್ ಪಡೆದ ತಂಡ..! ಇಲ್ಲಿದೆ ಡಿಟೇಲ್ಸ್‌

0
22

ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ರೋಮಾಂಚಕಾರಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲು ಕಂಡಿದ್ದರೂ, ತಂಡಕ್ಕೆ ಒಂದು ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನೀಡಿದ್ದ 256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ನಿಗದಿತ ಓವರ್‌ಗಳಲ್ಲಿ 200 ರನ್‌ಗಳಿಗೆ ಸೀಮಿತಗೊಂಡು 55 ರನ್‌ಗಳ ಅಂತರದಿಂದ ಪರಾಜಯಗೊಂಡಿತು.

ಆದ್ರೆ ಈ ಸೋಲಿನ ಮಧ್ಯೆಯೂ ಆರ್‌ಸಿಬಿ ನೆಟ್ ರನ್ ರೇಟ್ ಆಧಾರದ ಮೇಲೆ ಐಪಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಿದ್ದರೆ ಹೈದರಾಬಾದ್ ತಂಡಕ್ಕೆ ಆರ್‌ಸಿಬಿಯನ್ನು ಕೇವಲ 165 ರನ್‌ಗಳ ಒಳಗಾಗಿ ಕಟ್ಟಿಹಾಕಬೇಕಾದ ಅನಿವಾರ್ಯತೆ ಇತ್ತು. ಆದ್ರೆ ಆರ್‌ಸಿಬಿ ಬ್ಯಾಟರ್‌ಗಳು 200 ರನ್ ಗಳಿಸಿದ್ದರಿಂದ ಎಸ್‌ಆರ್‌ಹೆಚ್ ಲೆಕ್ಕಾಚಾರ ತಲೆಕೆಳಗಾಯಿತು.

ಇದರ ಪರಿಣಾಮವಾಗಿ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು. ಸಿಕ್ಸರ್‌ಗಳ ದಾಖಲೆ ಬರೆದ ನಾಯಕ: ಇದೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 50 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಪಾಟಿದಾರ್, ಕ್ರಿಸ್ ಗೇಲ್ (37 ಇನ್ನಿಂಗ್ಸ್) ಮತ್ತು ಆಂಡ್ರೆ ರಸೆಲ್ (47 ಇನ್ನಿಂಗ್ಸ್) ಇವರ ಸಾರ್ವಕಾಲಿಕ ದಾಖಲೆಯ ಬೆನ್ನ ಹಿಂದೆ ನಿಂತಿದ್ದಾರೆ.

ಅಷ್ಟೇ ಅಲ್ಲದೆ.. ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ (933 ಎಸೆತಗಳು) ನೂರು ಸಿಕ್ಸರ್ ಬಾರಿಸಿದ ವಿಶ್ವದ ಬ್ಯಾಟರ್‌ಗಳ ಪಟ್ಟಿಯಲ್ಲೂ ರಜತ್ ಪಾಟಿದಾರ್ ಈಗ ಮೂರನೇ ಸ್ಥಾನದಲ್ಲಿ ಘರ್ಜಿಸುತ್ತಿದ್ದಾರೆ. ಆರ್‌ಸಿಬಿ ಪಂದ್ಯವನ್ನು ಸೋತಿದ್ದರೂ, ಕ್ವಾಲಿಫೈಯರ್ ಟಿಕೆಟ್ ಸಿಕ್ಕಿರುವುದು ಮತ್ತು ನಾಯಕನ ಭರ್ಜರಿ ಫಾರ್ಮ್ ಅಭಿಮಾನಿಗಳಲ್ಲಿ ಹೊಸ ಜೋಶ್ ತುಂಬಿದೆ.