ದುಬೈ: ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಭರ್ಜರಿ ಏರಿಕೆ ಕಂಡಿದ್ದು, ಅಗ್ರಸ್ಥಾನಕ್ಕೇರಿದ್ದಾರೆ.
ಸ್ಟಾರ್ಕ್ ಎರಡು ಸ್ಥಾನಗಳ ಏರಿಕೆಯೊಂದಿಗೆ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿದು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ 3ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಒಂದು ಸ್ಥಾನ ಮೇಲೇರಿ 4ನೇ ಸ್ಥಾನ ಪಡೆದಿದ್ದರೆ, ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಒಂದು ಸ್ಥಾನ ಕುಸಿದು 5ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ ಒಂದು ಸ್ಥಾನ ಏರಿಕೆ ಕಂಡು 6ನೇ ಸ್ಥಾನಕ್ಕೆ ಬಂದಿದ್ದಾರೆ.
ಆಸ್ಟ್ರೇಲಿಯಾದ ಸ್ಕಾಟ್ ಬೋಲ್ಯಾಂಡ್ ಒಂದು ಸ್ಥಾನ ಕುಸಿದು 7ನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ನೊಮನ್ ಅಲಿ 8ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮತ್ತೊಬ್ಬ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಎರಡು ಸ್ಥಾನಗಳ ಏರಿಕೆಯೊಂದಿಗೆ ಟಾಪ್-10 ಪಟ್ಟಿಗೆ ಪ್ರವೇಶಿಸಿ 10ನೇ ಸ್ಥಾನ ಪಡೆದಿದ್ದಾರೆ.
ಟಾಪ್ 10 ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್
ಮಿಚೆಲ್ ಸ್ಟಾರ್ಕ್ – ಆಸ್ಟ್ರೇಲಿಯಾ
ಜಸ್ಪ್ರೀತ್ ಬುಮ್ರಾ – ಭಾರತ
ಮ್ಯಾಟ್ ಹೆನ್ರಿ – ನ್ಯೂಜಿಲೆಂಡ್
ಪ್ಯಾಟ್ ಕಮಿನ್ಸ್ – ಆಸ್ಟ್ರೇಲಿಯಾ
ಮಾರ್ಕೊ ಜಾನ್ಸೆನ್ – ದಕ್ಷಿಣ ಆಫ್ರಿಕಾ
ಕಗಿಸೊ ರಬಾಡಾ – ದಕ್ಷಿಣ ಆಫ್ರಿಕಾ
ಸ್ಕಾಟ್ ಬೋಲ್ಯಾಂಡ್ – ಆಸ್ಟ್ರೇಲಿಯಾ
ನೊಮನ್ ಅಲಿ – ಪಾಕಿಸ್ತಾನ
ಜೋಶ್ ಹೇಜಲ್‌ವುಡ್ – ಆಸ್ಟ್ರೇಲಿಯಾ
ನಾಥನ್ ಲಿಯಾನ್ – ಆಸ್ಟ್ರೇಲಿಯಾ






















