SK Home Ad
Home ಕ್ರೀಡೆ IPL2026: RCB ತಂಡದ ಜೊತೆ GTನೇ ಬರುತ್ತದೆ ಎಂದಿದ್ದರು: ನಾಳೆ ಪಂದ್ಯ ಇವರೇ ಗೆಲ್ಲೋದು; ಜೋತಿಷ್ಯ

IPL2026: RCB ತಂಡದ ಜೊತೆ GTನೇ ಬರುತ್ತದೆ ಎಂದಿದ್ದರು: ನಾಳೆ ಪಂದ್ಯ ಇವರೇ ಗೆಲ್ಲೋದು; ಜೋತಿಷ್ಯ

0
63

IPL2026 Final: ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನ ಹೆಚ್ಚಾಗಿದೆ. ಈ ನಡುವೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುವಂತಹ ಭವಿಷ್ಯವೊಂದನ್ನು ಪ್ರಖ್ಯಾತ ಜೋತಿಷ್ಯರಾದ ಡಾ. ವೈ. ಎಸ್. ಕೆ ಆಚಾರ್ಯರು ನುಡಿದಿದ್ದಾರೆ. ಅಂತಿಮ ಮಹಾಸಮರದಲ್ಲಿ ಆರ್‌ಸಿಬಿ ತಂಡದ ಜೊತೆ ಸೆಣೆಸಾಡಲು ಮತ್ತೆ ಗುಜರಾತ್ ಟೈಟನ್ಸ್ (GT) ತಂಡವೇ ಬರಲಿದೆ ಎಂದು ಮೊದಲೇ ಭವಿಷ್ಯ ಜಾತಕದ ಮೂಲಕ ತಿಳಿಸಿದ್ದಾರೆ.

ಈ ಹಿಂದೆ ನಡೆದ ಮಹತ್ವದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಹಣಾಹಣಿಯಲ್ಲಿ ಆರ್‌ಸಿಬಿ ಸೋತಿದ್ದರು, ಗೆದ್ದು ದಾಖಲಿಸಿ, ಕ್ವಾಲಿಫೈಯರ್ ಹಂತವನ್ನು ತಲುಪಿತ್ತು. ಆರ್‌ಸಿಬಿ ಅಭಿಮಾನಿಗಳು ವರ್ಷಗಳಿಂದ ಕಾಯುತ್ತಿದ್ದ ಆ ಸುವರ್ಣ ದಿನ ಸನ್ನಿಹಿತವಾಗುತ್ತಿದ್ದು, ಈ ಬಾರಿ ಮತ್ತೇ ಕಪ್ ಗೆಲ್ಲುವ ಕನಸು ನನಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಆಚಾರ್ಯರು ಭವಿಷ್ಯದ ಮಾತುಗಳು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿವೆ.

ಮತ್ತೊಂದು ರೋಚಕ ವಿಚಾರವೆಂದರೆ, ನಾಳೆ ನಡೆಯಲಿರುವ ಅತ್ಯಂತ ನಿರ್ಣಾಯಕ ಪಂದ್ಯದ ಕುರಿತು ಕೂಡ ಆಚಾರ್ಯರು ಮಹತ್ವದ ಸುಳಿವು ನೀಡಿದ್ದಾರೆ. ನಾಳೆಯ ಪಂದ್ಯದಲ್ಲಿ ಯಾವ ತಂಡ ಟಾಸ್ (Toss) ಗೆಲ್ಲುತ್ತದೆಯೋ, ಅದೇ ತಂಡ ಪಂದ್ಯದಲ್ಲಿ ಜಯಶಾಲಿಯಾಗಲಿದೆ ಎಂದು ಜ್ಯೋತಿಷ್ಯದ ಲೆಕ್ಕಾಚಾರಗಳ ಮೂಲಕ ಪ್ರಕಟಿಸಿದ್ದಾರೆ. ಹೀಗಾಗಿ ನಾಳೆಯ ಪಂದ್ಯದಲ್ಲಿ ಕೇವಲ ಆಟ ಅಷ್ಟೇ ಅಲ್ಲದೆ, ಟಾಸ್ ಪ್ರಕ್ರಿಯೆಯೂ ಸಹ ಪಂದ್ಯದ ಹಣೆಬರಹವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಒಟ್ಟಾರೆಯಾಗಿ… ಜ್ಯೋತಿಷ್ಯ ಡಾ. ವೈ. ಎಸ್. ಕೆ ಆಚಾರ್ಯರ ಈ ಭವಿಷ್ಯವಾಣಿ ಸದ್ಯ ಸಂಯುಕ್ತ ಕರ್ನಾಟಕ್ಕೆ ನೀಡಿದ್ದು, ಹಾಗೂ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜ್ಯೋತಿಷ್ಯದ ಈ ಲೆಕ್ಕಾಚಾರ ನಿಜವಾಗಿ ಆರ್‌ಸಿಬಿ ತಂಡ ಫೈನಲ್ ತಲುಪಿ ಇತಿಹಾಸ ಸೃಷ್ಟಿಸುತ್ತದೆಯೇ ಎಂಬುದನ್ನು ನೋಡಲು ಇಡೀ ಕ್ರೀಡಾಲೋಕ ಕಾತರದಿಂದ ಕಾಯುತ್ತಿದೆ.