SK Home Ad
Home ಅಪರಾಧ ಬೈಕ್-ಕಾರು ಅಪಘಾತ: ಪತಿ, ಪತ್ನಿ ಸಾವು

ಬೈಕ್-ಕಾರು ಅಪಘಾತ: ಪತಿ, ಪತ್ನಿ ಸಾವು

0
261
accident

ಚಿಕ್ಕೋಡಿ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪತಿ-ಪತ್ನಿ ಮೃತಪಟ್ಟ ಘಟನೆ ನಡೆದ ಘಟನೆ ನಿಪ್ಪಾಣಿ-ಚಿಕ್ಕೋಡಿ ರಸ್ತೆಯ ಕೋಥಳಿ ಕ್ರಾಸ್ ಬಳಿ ಭಾನುವಾರ ಜರುಗಿದೆ.
ಗೋಕಾಕ ತಾಲೂಕಿನ ಮಲ್ಲಾಪೂರ ಪಿ.ಜಿ ಗ್ರಾಮದ ಬಸವರಾಜ ನಂದಗಾವಿ(೪೮), ಪತ್ನಿ ದೊಡವ್ವ ನಂದಗಾವಿ (೪೨) ಮೃತರು. ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಬಸವರಾಜ ದ್ವಿಚಕ್ರವಾಹನ ಮೇಲೆ ಪತ್ನಿ ಜತೆ ಕೊಥಳಿ ಗ್ರಾಮದ ಸಂಬಂಧಿಕರ ಮನೆಗೆ ಹೊರಟಿದ್ದಾಗ ಕೊಥಳಿ ಕ್ರಾಸ್ ಬಳಿ ನಿಪ್ಪಾಣಿಯಿಂದ ಚಿಕ್ಕೋಡಿ ಮಾರ್ಗವಾಗಿ ಉಸ್ಮಾನಾಬಾದ್ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸವರಾಜ್ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ದೊಡ್ಡವ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಗಾಯಗೊಂಡ ಕಾರು ಚಾಲಕ ಜ್ಞಾನೇಶ್ವರ ಅವರ ಪತ್ನಿ ಅಮೃತ ಮತ್ತು ಪುತ್ರ ರಾಜವೀರ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೀರಜ್‌ಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಖಡಕಲಾಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.