Home Advertisement
Home ಅಪರಾಧ ಪಡಿತರ ಅಕ್ಕಿ ಅಕ್ರಮ ಸಾಗಣೆ: ಓರ್ವನ ಬಂಧನ

ಪಡಿತರ ಅಕ್ಕಿ ಅಕ್ರಮ ಸಾಗಣೆ: ಓರ್ವನ ಬಂಧನ

0
108

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಅಕ್ಕಿ ವಾಹನ ಸಮೇತ ಓರ್ವನನ್ನು ವಶಕ್ಕೆ ಪಡೆದ ಘಟನೆ ರಬಕವಿ-ಬನಹಟ್ಟಿಯಲ್ಲಿ ನಡೆದಿದೆ.

ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಶಹರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಮಿನಿ ಟ್ರಕ್ ವಾಹನದಲ್ಲಿ 71 ಚೀಲಗಳಷ್ಟು ಸಾಗಾಟ ಮಾಡುತ್ತಿದ್ದ ಅಕ್ಕಿ ಸಮೇತ ಅಪರಾಧಿ ಹೊಸೂರಿನ ಶಿವಾನಂದ ಬಾಲಚಂದ್ರ ಕುದರಿ ಎಂಬಾತನನ್ನು ಆಹಾರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಆಹಾರ ಇಲಾಖೆ ತಹಶೀಲ್ದಾರ ವಿಠ್ಠಲ ಕೂಗಾಟೆ ಸೇರಿದಂತೆ ಅವರ ತಂಡದ ನೇತೃತ್ವದಲ್ಲಿ ದಾಳಿ ಮಾಡಿ ವ್ಯಕ್ತಿ ಬಂಧಿಸುವ ಮೂಲಕ ಅಕ್ರಮ ಅಕ್ಕಿ ವಶಕ್ಕೆ ಪಡೆದಿದ್ದಾರೆ.