ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಸಂವಹನದ ಕೊರೆತೆಯಿಂದಾಗಿ ಈ ಸನ್ನಿವೇಶ ಸೃಷ್ಟಿಯಾಗಿದೆ. ನಾನೇ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಅಕ್ಸೆಪ್ಟ್ ಮಾಡಲ್ಲ ಎಂದು ಹೇಳಿದ್ದೇನೆ ಎಂದರು.
ಶೀಘ್ರದಲ್ಲಿಯೇ ಎಲ್ಲವೂ ಸರಿಯಾಗಲಿದೆ ಎಂದ ಅವರು, ಖಾತೆ ಹಂಚಿಕೆ ಕುರಿತ ವಿಚಾರದ ಬಗ್ಗೆ ಏನು ಮಾತನಾಡಿದ್ದೇವೆ, ಎಲ್ಲವನ್ನೂ ಮಾಧ್ಯಮದ ಎದುರು ಹೇಳಲಾಗುವುದಿಲ್ಲ.
ಜೂ. 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ರಾಮಲಿಂಗಾ ರೆಡ್ಡಿ ಅವರು ಕೂಡ ಪ್ರಮಾಣವಚನ ಸ್ವೀಕರಿಸಿದ್ದರು. ಬಳಿಕ ಜೂನ್ 5 ರಂದು ತಾವು ಕೇಳಿದ್ದ ಖಾತೆಯನ್ನು ನೀಡಿಲ್ಲ ಎಂದು ಅವರು ರಾಜೀನಾಮೆ ನೀಡಿದ್ದರು.




















