SK Home Ad
Home ಸುದ್ದಿ 2 ಸಲ RCBಗೆ ಕಪ್: ಬೆಂಗಳೂರು ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿ ಶಾಕ್ ಕೊಟ್ಟ ಆಲ್...

2 ಸಲ RCBಗೆ ಕಪ್: ಬೆಂಗಳೂರು ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿ ಶಾಕ್ ಕೊಟ್ಟ ಆಲ್ ರೌಂಡರ್ ಜೇಕಬ್ ಬೆಥಲ್

0
6

2 ಸಲ RCBಗೆ ಕಪ್: ಬೆಂಗಳೂರು ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿ ಶಾಕ್ ಕೊಟ್ಟ ಆಲ್ ರೌಂಡರ್
ಜೇಕಬ್‌ ಬೆಥಲ್

ಐಪಿಎಲ್ 2027 ಆರಂಭಕ್ಕೂ ಮುನ್ನ  ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ  ದೊಡ್ಡ ಲಾಸ್‌ ಆಗಿದೆ. ಇಂಗ್ಲೆಂಡ್‌ನ ಯುವ ಆಟಗಾರ ಜೇಕಬ್ ಬೆಥೆಲ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಗೆ ಆದ್ಯತೆ ನೀಡಲು ಮುಂದಾಗಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಬೆಥೆಲ್, ಆರ್‌ಸಿಬಿ ತಂಡದೊಂದಿಗಿನ ಎರಡು ವರ್ಷಗಳ ಪಯಣವನ್ನು ಸ್ಮರಿಸಿದ್ದಾರೆ. ತಮ್ಮ ಮೊದಲ ಐಪಿಎಲ್ ಅನುಭವ ನೀಡಿದ ಆರ್‌ಸಿಬಿ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ.

ಎರಡು ವರ್ಷಗಳ ಕಾಲ ತಂಡದೊಂದಿಗೆ ಉತ್ತಮ ಅನುಭವ ಪಡೆದಿದ್ದೇನೆ. ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ಗೌರವದ ಸಂಗತಿ. ಅಲ್ಲದೆ, ಎರಡು ಬಾರಿ ಚಾಂಪಿಯನ್‌  ತಂಡದ ಭಾಗವಾಗಿದ್ದು ವಿಶೇಷ ಅನುಭವ ಎಂದು ಅವರು ತಿಳಿಸಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿರುವ ಬೆಥೆಲ್, ಮತ್ತೆ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಇನ್ನು ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ಬೆಥೆಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಅವರು ಇಂಗ್ಲೆಂಡ್ ತಂಡದ ಮುಂಬರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಗಳಿಂದಲೂ ಹೊರಗುಳಿದಿದ್ದಾರೆ. ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರು ಸಂಪೂರ್ಣ ಚೇತರಿಕೆಯತ್ತ ಗಮನಹರಿಸಲಿದ್ದಾರೆ.