SK Home Ad
Home ಸುದ್ದಿ ದೇಶ ರಾಷ್ಟ್ರಪತಿ ಅಂಗರಕ್ಷಕನ ಅಂದಕ್ಕೆ ಯುವತಿಯರು ಫಿದಾ: ನೆಟ್ಟಿಗರ ಮನಗೆದ್ದ ಯುವ ಅಧಿಕಾರಿ!

ರಾಷ್ಟ್ರಪತಿ ಅಂಗರಕ್ಷಕನ ಅಂದಕ್ಕೆ ಯುವತಿಯರು ಫಿದಾ: ನೆಟ್ಟಿಗರ ಮನಗೆದ್ದ ಯುವ ಅಧಿಕಾರಿ!

0
24

ನವದೆಹಲಿ: ಸಾಮಾನ್ಯವಾಗಿ ದೇಶದ ಪ್ರಮುಖ ಗಣ್ಯರು ಅಥವಾ ಸಿನಿಮಾ ತಾರೆಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ರಕ್ಷಣೆಗೆ ನಿಯೋಜನೆಗೊಂಡಿರುವ ಬಾಡಿಗಾರ್ಡ್‌ಗಳು (ಅಂಗರಕ್ಷಕರು) ಜನರ ಗಮನ ಸೆಳೆಯುವುದು ಸಹಜ. ಆದ್ರೆ ಸದ್ಯ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗರಕ್ಷಕರೊಬ್ಬರು ತಮ್ಮ ಆಕರ್ಷಕ ವ್ಯಕ್ತಿತ್ವ ಹಾಗೂ ಅಪ್ರತಿಮ ಅಂದದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದಾರೆ.

ರಾಷ್ಟ್ರಪತಿಗಳ ಅಂಗರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಈಗ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿರುವ ಯುವ ಅಧಿಕಾರಿ. ರಾಷ್ಟ್ರಪತಿಗಳು ಪಾಲ್ಗೊಳ್ಳುವ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇವರ ಗಂಭೀರ ನೋಟ ಮತ್ತು ಹ್ಯಾಂಡ್ಸಮ್ ಲುಕ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಯುವತಿಯರು ಫಿದಾ ಆಗಿದ್ದಾರೆ.

ಹಾಗೇ ವಿವಿಧ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳು ಆಗಮಿಸಿದಾಗ, ಅಲ್ಲಿ ನೆರೆದಿರುವ ಯುವತಿಯರು ರಾಷ್ಟ್ರಪತಿಗಳಿಗಿಂತ ಹೆಚ್ಚಾಗಿ ಈ ಯುವ ಅಧಿಕಾರಿಯನ್ನು ನೋಡಲು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ. ಈಗ ಪರಿಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದರೆ, ಮೇಜರ್ ರಿಷಬ್ ಸಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಮತ್ತು ಹತ್ತಿರದಿಂದ ನೋಡಲು ಯುವತಿಯರ ದಂಡೇ ಮುತ್ತಿಗೆ ಹಾಕುತ್ತಿದೆ. ಯುವತಿಯರ ಈ ಅತಿಯಾದ ಕ್ರೇಜ್‌ನಿಂದಾಗಿ ಸ್ವತಃ ಅಂಗರಕ್ಷಕರೇ ಮುಜುಗರಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಯೊಬ್ಬರ ಅಂದಕ್ಕೆ ಸಾರ್ವಜನಿಕರು ಈ ಪರಿ ಮನಸೋತಿರುವುದನ್ನು ಕಂಡು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ರಾಷ್ಟ್ರಪತಿಗಳಿಗೆ ಭದ್ರತೆ ನೀಡುವ ಈ ಬಾಡಿಗಾರ್ಡ್‌ಗೆ ಯುವತಿಯರಿಂದ ರಕ್ಷಣೆ ಪಡೆಯಲು ಈಗ ಮತ್ತೊಬ್ಬ ಬಾಡಿಗಾರ್ಡ್ ಬೇಕಾಗಿದೆ” ಎಂದು ನೆಟ್ಟಿಗರು ತಮಾಷೆಯಾಗಿ ಚರ್ಚಿಸುತ್ತಿದ್ದಾರೆ.

ಒಟ್ಟಾರೆ.. ಮೇಜರ್ ರಿಷಬ್ ಸಿಂಗ್ ಈ ಸೆಲೆಬ್ರಿಟಿ ಮಾದರಿಯ ಜನಪ್ರಿಯತೆ ಸದ್ಯ ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದೆ.