SK Home Ad
Home ಸುದ್ದಿ ದೇಶ ಕೇಂದ್ರ ಬಜೆಟ್ ಪ್ರಾರಂಭಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ ಪ್ರಾರಂಭಿಸಿದ ನಿರ್ಮಲಾ ಸೀತಾರಾಮನ್

0
228

ನವದೆಹಲಿ: ಇತಿಹಾಸದಲ್ಲೇ ಎರಡನೇ ಬಾರಿಗೆ ಕೇಂದ್ರ ಬಜೆಟ್ ಭಾನುವಾರ ಮಂಡನೆಯಾಗುತ್ತಿದ್ದು, ತಮ್ಮ 9ನೇ ಆಯವ್ಯಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ್ದು, ಹೊಸ ದಾಖಲೆ ಬರೆದಿದ್ದಾರೆ.

1999ರಂದು ಭಾನುವಾರ ಬಜೆಟ್ ಮಂಡನೆ ಮಾಡಲಾಗಿತ್ತು. ಇದು ಎರಡನೇ ಬಾರಿ ಕೇಂದ್ರ ಬಜೆಟ್ ಮಂಡನೆ ಆಗಿದೆ. ಭಾನುವಾರ ಬಜೆಟ್‌ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದರು.

ಈ ವೇಳೆ ಮಾತನಾಡಿರುವ ಅವರು, ಎಲ್ಲ ವರ್ಗದವರನ್ನೂ ಗಮನದಲ್ಲಿ ಇರಿಸಿಕೊಂಡು ಬಜೆಟ್ ಮಂಡನೆ ಮಾಡಲಾಗಿದೆ ಎಂದಿದ್ದಾರೆ. ವಿಕಸಿತ ಭಾರತದ ಗುರಿ ಸಾಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಇಂದು ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣದ ರೇಷ್ಮೆ ಸೀರೆ ಧರಿಸಿ ಸಂಸತ್ ಭವನದತ್ತ ತೆರಳಿದ್ದಾರೆ. ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.