Home Advertisement
Home ಸುದ್ದಿ ದೇಶ ತಂದೆ-ಮಗನಿಗೆ ಸವಾಲು: BRS ವಿರುದ್ಧ ಕವಿತಾ ಹೊಸ ಪಕ್ಷ ಘೋಷಣೆ

ತಂದೆ-ಮಗನಿಗೆ ಸವಾಲು: BRS ವಿರುದ್ಧ ಕವಿತಾ ಹೊಸ ಪಕ್ಷ ಘೋಷಣೆ

0
90

ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಮಾಜಿ ಸಂಸದೆ ಕೆ. ಕವಿತಾ (K. Kavitha) ಇಂದು (ಏಪ್ರಿಲ್ 25, 2026) ತಮ್ಮ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

‘ತೆಲಂಗಾಣ ರಾಷ್ಟ್ರ ಸೇನಾ’ (TRS) ಉದಯ : ಹೈದರಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಕವಿತಾ ಅವರು ತಮ್ಮ ಪಕ್ಷಕ್ಕೆ “ತೆಲಂಗಾಣ ರಾಷ್ಟ್ರ ಸೇನಾ (TRS)” ಎಂಬ ಹೆಸರನ್ನು ನೀಡಿರುವುದಾಗಿ ಘೋಷಿಸಿದರು. ಈ ಹೆಸರು ಹಿಂದೆ Telangana Rashtra Samithi (TRS) ಎಂಬ ಹೆಸರಿನಿಂದಲೇ ಪ್ರಖ್ಯಾತಿ ಪಡೆದಿದ್ದ ಪಕ್ಷದ ನೆನಪನ್ನು ಮೂಡಿಸುವಂತಿದೆ. ನಂತರ ಈ ಪಕ್ಷವನ್ನು Bharat Rashtra Samithi (BRS) ಎಂದು ಮರುನಾಮಕರಣ ಮಾಡಲಾಗಿತ್ತು.

ಕುಟುಂಬ ರಾಜಕೀಯಕ್ಕೆ ಬಿರುಕು? : ಕವಿತಾ ಅವರ ಈ ನಿರ್ಧಾರವು ತಂದೆ ಕೆ. ಚಂದ್ರಶೇಖರ್ ರಾವ್ ಮತ್ತು ಸಹೋದರ ಕೆ.ಟಿ. ರಾಮರಾವ್ ವಿರುದ್ಧ ನೇರ ಸವಾಲಾಗಿ ಕಾಣುತ್ತಿದೆ. ಈ ಹಿಂದೆ ಪಕ್ಷದೊಳಗಿನ ಭಿನ್ನಮತಗಳು ಗಂಭೀರವಾಗಿದ್ದವು, ಕೆ. ಕವಿತಾ 2025 ಸೆಪ್ಟೆಂಬರ್‌ನಲ್ಲಿ BRS ನಿಂದ ಹೊರಬಂದಿದ್ದರು. ನಂತರ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.

ಕವಿತಾ ಆರೋಪ: “ತೆಲಂಗಾಣದ ಮೂಲ ಆಶಯ ಮರೆತುಹೋಗಿದೆ” ಹೊಸ ಪಕ್ಷ ಘೋಷಣೆ ವೇಳೆ ಕವಿತಾ ಅವರು ತೀವ್ರ ವಾಗ್ದಾಳಿ ನಡೆಸಿ BRS ತೆಲಂಗಾಣದ ಮೂಲ ಸಿದ್ಧಾಂತಗಳನ್ನು ಮರೆತಿದೆ, ಜನರ ಧ್ವನಿಯಾಗಬೇಕಿದ್ದ ಪಕ್ಷ ದೂರವಾಗಿದೆ, “ಇದು ಕೇವಲ ರಾಜಕೀಯ ಹೋರಾಟವಲ್ಲ, ಸ್ವಾಭಿಮಾನದ ಹೋರಾಟ” ಎಂದರು

ಹೊಸ ಪಕ್ಷದ ಗುರಿಗಳು : ಕವಿತಾ ಅವರು ತಮ್ಮ ಪಕ್ಷವು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ. “ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ವೇದಿಕೆ” ಆಗುವುದು ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.

ರಾಜಕೀಯದಲ್ಲಿ ಹೊಸ ಸಮೀಕರಣ: ಈ ಹೊಸ ಪಕ್ಷದ ಘೋಷಣೆ ತೆಲಂಗಾಣ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ವಿಶೇಷವಾಗಿ BRS ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನೇರ ಸವಾಲು ಎಸೆದಿರುವ ಕವಿತಾ, ಮುಂದಿನ 2028–29ರ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ಸೂಚನೆ ನೀಡಿದ್ದಾರೆ.