SK Home Ad
Home ಸುದ್ದಿ ದೇಶ ನೀತಿ ಆಯೋಗ್ ಪುನರ್‌ರಚನೆ: ಅಶೋಕ್ ಲಹಿರಿ ಉಪಾಧ್ಯಕ್ಷರಾಗಿ ನೇಮಕ

ನೀತಿ ಆಯೋಗ್ ಪುನರ್‌ರಚನೆ: ಅಶೋಕ್ ಲಹಿರಿ ಉಪಾಧ್ಯಕ್ಷರಾಗಿ ನೇಮಕ

0
222

ಲಹಿರಿ ನೇತೃತ್ವದಲ್ಲಿ ನೀತಿ ಆಯೋಗ್: ನವೀನತೆ ಮತ್ತು ಅಭಿವೃದ್ಧಿಗೆ ಒತ್ತು

ಭಾರತ ಸರ್ಕಾರವು ಮಹತ್ವದ ಆಡಳಿತಾತ್ಮಕ ನಿರ್ಧಾರವಾಗಿ NITI Aayog (ನೀತಿ ಆಯೋಗ್) ಸಂಸ್ಥೆಯನ್ನು ಪುನರ್‌ರಚಿಸಿ, ಹೊಸ ಉಪಾಧ್ಯಕ್ಷರು ಹಾಗೂ ಪೂರ್ಣಾವಧಿ ಸದಸ್ಯರನ್ನು ನೇಮಕ ಮಾಡಿರುವುದಾಗಿ ಘೋಷಿಸಿದೆ. ಈ ನೇಮಕಾತಿ ಏಪ್ರಿಲ್ 24, 2026ರಿಂದ ಜಾರಿಗೆ ಬಂದಿದೆ.

ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಲಹಿರಿ : ಸಂಸ್ಥೆಯ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್‌ ಲಾಹಿರಿ ಅವರನ್ನು ನೇಮಕ ಮಾಡಲಾಗಿದೆ. ಅವರು ಆರ್ಥಿಕ ಮತ್ತು ನೀತಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ತಜ್ಞರಾಗಿದ್ದಾರೆ. ಇಂದು ನೀತಿ ಆಯೋಗದ ನೂತನ ಉಪಾಧ್ಯಕ್ಷ ಅಶೋಕ್ ಲಾಹಿರಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾದರು

ಡಾ. ಅಶೋಕ್ ಕುಮಾರ್ ಲಹಿರಿ ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಮುಖ್ಯ ಆರ್ಥಿಕ ಸಲಹೆಗಾರ (CEA) ಮತ್ತು ರಾಜಕಾರಣಿ. ಇವರು 15ನೇ ಹಣಕಾಸು ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಬಂಧನ್ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಪ್ರಸ್ತುತ, ಪಶ್ಚಿಮ ಬಂಗಾಳದ ಬಲೂರ್‌ಘಾಟ್ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ

ಪೂರ್ಣಾವಧಿ ಸದಸ್ಯರ ಪಟ್ಟಿ : ನೀತಿ ಆಯೋಗ್‌ನ ಪೂರ್ಣಾವಧಿ ಸದಸ್ಯರಾಗಿ ರಾಜೀವ್ ಗೌಬಾ, ಪ್ರೊ. ಕೆ.ವಿ. ರಾಜು, ಪ್ರೊ. ಗೋಬರ್ಧನ್ ದಾಸ್, ಡಾ. ಎಂ. ಶ್ರೀನಿವಾಸ್ ಮತ್ತು ಪ್ರೊ. ಅಭಯ್ ಕರಂಡಿಕರ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ನೀತಿ ಆಯೋಗ್ ಭಾರತದಲ್ಲಿ ನೀತಿ ರೂಪಿಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದ್ದು, ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ, ನವೀನತೆ ಮತ್ತು ದೀರ್ಘಕಾಲೀನ ಅಭಿವೃದ್ಧಿಗೆ ದಾರಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಹಾಗೆಯೇ, ಹೊಸದಾಗಿ ನೇಮಕಗೊಂಡ ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರು ಪರಿಣಾಮಕಾರಿ ಹಾಗೂ ಫಲಪ್ರದ ಕಾರ್ಯಾವಧಿ ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.