SK Home Ad
Home ಸುದ್ದಿ ದೇಶ ‘ವೋಟ್ ಚೋರಿ’ ವಿರುದ್ಧ ಸಿಡಿದೆದ್ದ ‘ಇಂಡಿಯಾ’  ಮೈತ್ರಿಕೂಟ: ಚುನಾವಣಾ ಆಯೋಗಕ್ಕೆ ಮುತ್ತಿಗೆ

‘ವೋಟ್ ಚೋರಿ’ ವಿರುದ್ಧ ಸಿಡಿದೆದ್ದ ‘ಇಂಡಿಯಾ’  ಮೈತ್ರಿಕೂಟ: ಚುನಾವಣಾ ಆಯೋಗಕ್ಕೆ ಮುತ್ತಿಗೆ

0
7

ಕೇಂದ್ರ ಸರ್ಕಾರದ ವಿರುದ್ಧ ‘ವೋಟ್ ಚೋರಿ’ ಆರೋಪ ಹೊರಿಸಿರುವ ವಿರೋಧ ಪಕ್ಷಗಳ  ‘ಇಂಡಿಯಾ’ (INDIA) ಒಕ್ಕೂಟ, ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯ ವಿರುದ್ಧ ದೇಶವ್ಯಾಪಿ ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ಅಕ್ಟೋಬರ್ 6 ರಂದು ವಿರೋಧ ಪಕ್ಷಗಳ ಎಲ್ಲಾ ಸಂಸದರು ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ನೇರ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ನಿಯಮಗಳ ಬದಲಾವಣೆಗೆ ಇಬ್ಬರು ಆಯುಕ್ತರೇ ಲಿಖಿತ ವಿರೋಧ ದಾಖಲಿಸಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ಆಯೋಗದ ಕಾರ್ಯವೈಖರಿ ಸಂಶಯಕ್ಕೆ ಕಾರಣವಾಗಿದೆ. ಈ ಕುರಿತು ಅಕ್ಟೋಬರ್ ಎರಡನೇ ವಾರದಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ವಿಪಕ್ಷಗಳು ನಿರ್ಧರಿಸಿವೆ. ಅಕ್ಟೋಬರ್ 2 ರಿಂದ 8 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸರಣಿ ಧರಣಿ, ನವೆಂಬರ್ 1 ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ಸೇರಿದಂತೆ ದೇಶದ ವಿವಿಧೆಡೆ ಜಾಗೃತಿ ಸಭೆಗಳು ನಡೆಯಲಿವೆ.

“ನೋಟುಬಂದಿಯಂತೆ ಈಗ ವೋಟ್ ಬಂದಿ ಮಾಡಿ ಮತದಾರರ ಹಕ್ಕು ಕಸಿಯಲಾಗುತ್ತಿದೆ” ಎಂದು ಕಿಡಿಕಾರಿರುವ ಮೈತ್ರಿಕೂಟ, ಸುಪ್ರೀಂ ಕೋರ್ಟ್‌ನಲ್ಲಿರುವ ಚುನಾವಣಾ ಅಕ್ರಮಗಳ ಪ್ರಕರಣಗಳನ್ನು ಶೀಘ್ರ ವಿಚಾರಣೆ ನಡೆಸಲು ಮನವಿ ಮಾಡುವುದಾಗಿ ತಿಳಿಸಿದೆ.