SK Home Ad
Home ಸುದ್ದಿ ದೇಶ ರಾಜೀನಾಮೆಯಿಂದ ಹೋರಾಟ ಮುಗಿದಿಲ್ಲ ಎಂದ ಜಿರಳೆ ಪಾರ್ಟಿ

ರಾಜೀನಾಮೆಯಿಂದ ಹೋರಾಟ ಮುಗಿದಿಲ್ಲ ಎಂದ ಜಿರಳೆ ಪಾರ್ಟಿ

0
361

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸಿರುವ ಕಾಕ್ರೋಚ್ ಜನತಾ ಪಕ್ಷದ ನಾಯಕ ಅಭಿಜಿತ್ ದೀಪ್ಕೆ, ನಮ್ಮ ಹೋರಾಟ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದಾರೆ.

ಇದು ವಿದ್ಯಾರ್ಥಿಗಳ ಪರವಾಗಿ ನಡೆದ ಹೋರಾಟಕ್ಕೆ ದೊರೆತ ಮೊದಲ ಗೆಲುವು ಎಂದಿರುವ ಅವರು ನಮ್ಮ ಇನ್ನೂ ಎರಡು ಪ್ರಮುಖ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಈ ಎರಡೂ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದಿದ್ದಾರೆ.

“ಹೆದರದಿದ್ದರೆ, ತಲೆಬಾಗದಿದ್ದರೆ ಯಾರ ಯಾರ ರಾಜೀನಾಮೆಯನ್ನಾದರೂ ಪಡೆಯಬಹುದು. ದೃಢ ಸಂಕಲ್ಪದಿಂದ ಹೋರಾಟ ನಡೆಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಯ ಸಾಧಿಸಬಹುದು ಎಂಬುದಕ್ಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ಸಾಕ್ಷಿ” ಎಂದು ಅವರು ಹೇಳಿದ್ದಾರೆ.