SK Home Ad
Home ಸುದ್ದಿ ದೇಶ ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಅಳಿಸಿದ ಮೆಟಾಗೆ ಕೇಂದ್ರದ ಸಮನ್ಸ್

ಪ್ರಧಾನಿ ನರೇಂದ್ರ ಮೋದಿ ಪೋಸ್ಟ್ ಅಳಿಸಿದ ಮೆಟಾಗೆ ಕೇಂದ್ರದ ಸಮನ್ಸ್

0
152

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಭಾರತೀಯ ಯುವಕರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ ಜುಲೈ 23ರಂದು ಮಾಡಿರುವ ಪೋಸ್ಟ್‌ನ್ನು ಅಮೆರಿಕ ಮೂಲದ ಮೆಟಾ ಕಂಪನಿ ಕಿತ್ತು ಹಾಕಿರುವುದು ಭಾರತದ ಸರ್ಕಾರದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು ಈ ಸಂಬಂಧ ಮೆಟಾದ ಸಾರ್ವಜನಿಕ ನೀತಿಗಳಿಗೆ ಸಂಬಂಧಿಸಿದ ಜಾಗತಿಕ ಮುಖ್ಯಸ್ಥರಿಗೆ ಸರ್ಕಾರ ಬುಲಾವ್ ಕಳುಹಿಸಿದೆ.

ಮೆಟಾದ ಸ್ವಯಂಚಾಲಿತ ಕಂಟೆಂಟ್ ಫಿಲ್ಟರ್‌ನಲ್ಲಿ ಉಂಟಾಗಿರುವ ದೋಷಗಳ ಕಾರಣ ಪ್ರಧಾನಿಯವರ ಫೇಸ್‌ಬುಕ್ ಪೋಸ್ಟ್ ಅಳಿಸಿಹೋಗಿದೆ ಎಂದು ಮೆಟಾ ಸಬೂಬು ನೀಡಿದರೂ ಈ ವಿವರಣೆ ಸಕಾರಣಯುಕ್ತವಾಗಿಲ್ಲ. ಸಮಗ್ರವಾಗಿ ಚರ್ಚಿಸುವ ಅಗತ್ಯವಿದೆ ಎಂದು ಸರ್ಕಾರದ ಮೂಲಗಳು ಪ್ರತಿಪಾದಿಸಿವೆ.

ಜುಲೈ 23ರ ಇನ್‌ಸ್ಟಾಗ್ರಾಮ್ ಪೋಸ್ಟನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಂತರ ಮೆಟಾ ಸಂಸ್ಥೆಯು ಫೇಸ್‌ಬುಕ್‌ನಲ್ಲಿ ಅದರ ಮೇಲೆ ನಿರ್ಬಂಧ ಹೇರಿತ್ತು. ಹೀಗಾಗಿ ಬಿಜೆಪಿ ಕಾರ್ಯಕರ್ತೆ ಪ್ರೀತಿ ಗಾಂಧಿಯವರು ಮೆಟಾದ ಕ್ರಮವನ್ನು ಪ್ರಶ್ನಿಸಿದ್ದರು. ಕಂಪನಿಯ ರಾಜಕೀಯ ತಾರತಮ್ಯ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನೂ ಪ್ರೀತಿಯವರು ಪ್ರಶ್ನಿಸಿದ್ದಾರೆ.