SK Home Ad
Home ತಾಜಾ ಸುದ್ದಿ ದೇವೇಗೌಡರಿಗೆ ಜನುಮದಿನದ ಶುಭಾಶಯ ಕೋರಿದ ಮೋದಿ

ದೇವೇಗೌಡರಿಗೆ ಜನುಮದಿನದ ಶುಭಾಶಯ ಕೋರಿದ ಮೋದಿ

0
155

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ವರಿಷ್ಠ ಎಚ್‌. ಡಿ. ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಎಚ್. ಡಿ. ದೇವೇಗೌಡರಿಗೆ ಅವರ ಜನ್ಮದಿನದಂದು ಶುಭ ಹಾರೈಕೆಗಳು. ಅವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಜಕೀಯ ವಲಯದಾದ್ಯಂತ ಗೌರವಾನ್ವಿತರಾಗಿದ್ದಾರೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಅವರ ಬದ್ಧತೆ ಗಮನಾರ್ಹವಾಗಿದೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಹಾರೈಸಿದ್ದಾರೆ