Home Advertisement
Home ತಾಜಾ ಸುದ್ದಿ ೨೫ರಿಂದ ಸಂಸತ್ ಅಧಿವೇಶನ

೨೫ರಿಂದ ಸಂಸತ್ ಅಧಿವೇಶನ

0
104

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನ ನವೆಂಬರ್ ೨೫ರಿಂದ ಡಿಸೆಂಬರ್ ೨೦ ರವರೆಗೆ ನಡೆಯಲಿದೆ.
ನವೆಂಬರ್ ೨೬ ಸಂವಿಧಾನ ದಿನವಾಗಿದ್ದು, ಭಾರತ ಸಂವಿಧಾನ ಅಳವಡಿಸಿಕೊಂಡು ೭೫ ವರ್ಷಗಳು ಸಂದಿರುವ ಹಿನ್ನೆಯಲ್ಲಿ ಅಧಿವೇಶನದ ಎರಡನೇ ದಿನದಂದು ಸೆಂಟ್ರಲ್ ಹಾಲ್‌ನಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಂಗಳವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ನಂತರ ನಡೆಯುತ್ತಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಕ್ಫ್ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಒಂದು ರಾಷ್ಟç ಒಂದು ಚುನಾವಣೆ ಮಸೂದೆಯನ್ನು ಸಹ ಈ ಅಧಿವೇಶನದಲ್ಲಿ ಪರಿಚಯಿಸುವ ಸಾಧ್ಯತೆಯಿದೆ.