SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಲಯನ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಲಯನ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

0
231
ಲಯನ್ಸ್

ಶಿರಸಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿನ ಲಯನ್ಸ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯ ಹಾಗೂ ಒಂದನೇ ತರಗತಿಯ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯರಾಗಿ ಲಯನ್ಸ್ ಕ್ಲಬ್ ಶಿರಸಿ ಪ್ರಾಯೋಜಕತ್ವದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಯನ್ ಪ್ರೊಫೆಸರ್ ಎನ್.ವಿ.ಜಿ.ಭಟ್ ಅವರು ಶುಭಾಶಯಗಳನ್ನು ಕೋರುತ್ತಾ, ಇಂದು ಲಯನ್ಸ್ ಶಾಲೆಗೆ ಗೋಕುಲವೇ ಇಳಿದಂತಿದೆ. ಎಂದು ಹರ್ಷ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ತ್ರಿವಿಕ್ರಮ ಪಟವರ್ಧನ್, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ರಮಾ ಪಟವರ್ಧನ್, ಲಯನ್ಸ ಕ್ಲಬ್ ರೀಜನಲ್ ಚೇರ್‌ಪರ್ಸನ್ ಎಂ ಜೆ ಎಫ್ ಲಯನ್ ಜ್ಯೋತಿ ಭಟ್, ಲಯನ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವಿ ನಾಯಕ್ ಉಪಸ್ಥಿತರಿದ್ದರು.
ಶಿಕ್ಷಕರು ಮತ್ತು ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿ, ಪಾಲಕರನ್ನೊಳಗೊಂಡ ಕಾರ್ಯಕ್ರಮ ಶ್ರೀಕೃಷ್ಣನ ಪೂಜೆಯೊಂದಿಗೆ ಆರಂಭವಾಗಿ, ಮಕ್ಕಳ ನೃತ್ಯ, ವೇಷಭೂಷಣದೊಂದಿಗೆ ಮೂಡಿಬಂದಿತು.

ಲಯನ್ಸ್