SK Home Ad
Home ತಾಜಾ ಸುದ್ದಿ ನಕ್ಸಲ್‌ರ ಶರಣಾಗತಿ ಇಷ್ಟೊಂದು ವೈಭವೀಕರಣ ಸಲ್ಲದು

ನಕ್ಸಲ್‌ರ ಶರಣಾಗತಿ ಇಷ್ಟೊಂದು ವೈಭವೀಕರಣ ಸಲ್ಲದು

0
121
ಜಗದೀಶ ಶೆಟ್ಟರ್‌

ಹುಬ್ಬಳ್ಳಿ : ನಕ್ಸಲ್‌ರ ಶರಣಾಗತಿ ಇಷ್ಟೊಂದು ವೈಭವೀಕರಣದ ಅವಶ್ಯಕತೆ ಇರಲಿಲ್ಲ. ಅಲ್ಲದೇ ನಕ್ಸಲ್ ಶರಣಾಗತಿ ಆಗುವಲ್ಲಿ ಅನುಸರಿಸಿದ ಕ್ರಮ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕ್ಸಲ್‌ರ ಶರಣಾಗತಿ ವಿಷಯದಲ್ಲಿ ಯಾವುದೇ ಸರ್ಕಾರ ಇದ್ದರೂ ಅದಕ್ಕೊಂದು ಕಾನೂನಾತ್ಮಕ ಪ್ರಕ್ರಿಯೆ ಇದ್ದೇ ಇದೆ. ಆದರೆ, ಈ ಸರ್ಕಾರವು ನಕ್ಸಲ್‌ರ ಶರಣಾಗತಿಯಲ್ಲೂ ಪ್ರಚಾರಕ್ಕೆ ಹೊರಟಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮುಂದೆ ನಕ್ಸಲರು ಶರಣಾಗತಿ ಮಾಡಲು ವ್ಯವಸ್ಥೆ ಮಾಡಲಾಗಿತ್ತಂತೆ. ಆದರೆ, ಮುಖ್ಯಮಂತ್ರಿ ತಮ್ಮ ಮುಂದೆ ಶರಣಾಗತಿ ಆಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ಸರಿಯಾದ ಕ್ರಮವಲ್ಲ. ನಕ್ಸಲರ ಶಸ್ತಾçಸ್ತç ಎಲ್ಲಿವೆ? ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆಯೇ ಎಂಬುದೇನೂ ಗೊತ್ತಿಲ್ಲ ಎಂದು ಹೇಳಿದರು.