ಬೆಂಗಳೂರಿನಲ್ಲಿ ಯೋಗಿ ಆದಿತ್ಯನಾಥ್ ಹೂಡಿಕೆ ಸಂವಾದ: UP ಜಿಸಿಸಿ ರಾಜಧಾನಿ’ಯಾಗಿಸುವ ಗುರಿ!
ಬೆಂಗಳೂರು: ಉತ್ತರ ಪ್ರದೇಶವನ್ನು ದೇಶದ ಪ್ರಮುಖ ಹೂಡಿಕೆ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಲಾದ ‘ಉತ್ತರ ಪ್ರದೇಶ ಜಾಗತಿಕ ಬೆಳವಣಿಗೆ ಸಂವಾದ-2026’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ಬೆಂಗಳೂರುದಲ್ಲಿ ನಡೆದ ಈ ರೋಡ್ ಶೋ ವೇಳೆ, 2031ರ ವೇಳೆಗೆ 500ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಹಾಗೂ 43 ಮಿಲಿಯನ್ ಚದರ ಅಡಿ ರೆಡಿ-ಟು-ಮೂವ್ ಕಚೇರಿ ಸ್ಥಳಾವಕಾಶ ನಿರ್ಮಿಸುವ ಮೂಲಕ ಉತ್ತರ ಪ್ರದೇಶವನ್ನು ದೇಶದ ‘ಜಿಸಿಸಿ ರಾಜಧಾನಿ’ಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಯೋಗಿ ಸರ್ಕಾರ ಮುಂದಿಟ್ಟಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ
ಕಾರ್ಯಕ್ರಮದಲ್ಲಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಒಪ್ಪಂದಗಳು ನಡೆದವು. ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಪ್ರೆಸ್ಟೀಜ್ ಗ್ರೂಪ್ ₹15,000 ಕೋಟಿ, ಎಂಬಸಿ ಗ್ರೂಪ್ ₹5,000 ಕೋಟಿ, ರಹೇಜಾ-ಮೈಂಡ್‌ಸ್ಪೇಸ್ REIT ₹5,000 ಕೋಟಿ ಹಾಗೂ ಹಾರಿಜಾನ್ (ಬ್ಲಾಕ್‌ಸ್ಟೋನ್) ₹10,000 ಕೋಟಿ ಹೂಡಿಕೆ ಮಾಡುವ ಒಪ್ಪಂದಗಳಿಗೆ ಸಹಿ ಹಾಕಿದವು. ಈ ಹೂಡಿಕೆಗಳ ಮೂಲಕ ಉತ್ತರ ಪ್ರದೇಶದಲ್ಲಿ ಖಾಸಗಿ ಕೈಗಾರಿಕಾ ಮತ್ತು ವ್ಯಾಪಾರ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು.
ಕಾರ್ಯಕ್ರಮದಲ್ಲಿ ಗೂಗಲ್, ಎನ್‌ವಿಡಿಯಾ, ಆಕ್ಸೆಲ್ ಪಾರ್ಟ್‌ನರ್ಸ್, ಇನ್‌ಮೊಬಿ, ಯುಲು, ಸರ್ವಮ್ ಎಐ ಹಾಗೂ ಬ್ಲಾಕ್‌ಸ್ಟೋನ್ ಸಂಸ್ಥೆಗಳ ಪ್ರಮುಖರು ಭಾಗವಹಿಸಿ ಕೃತಕ ಬುದ್ಧಿಮತ್ತೆ (AI), ಡೇಟಾ ಸೆಂಟರ್‌ಗಳು, ಎಲೆಕ್ಟ್ರಾನಿಕ್ಸ್, ಐಟಿ ಸೇವೆಗಳು ಹಾಗೂ ನಗರ ರೂಪಾಂತರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!
ಮೂಲಸೌಕರ್ಯ, ಐಟಿ ಮತ್ತು ಐಟಿ ಆಧಾರಿತ ಸೇವೆಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು ಹಾಗೂ ವಿದೇಶಿ ನೇರ ಹೂಡಿಕೆ (FDI) ಕುರಿತ ಮೂರು ವಿಶೇಷ ಅಧಿವೇಶನಗಳನ್ನು ಈ ಕಾರ್ಯಕ್ರಮ ಒಳಗೊಂಡಿತ್ತು. ಈ ವೇಳೆ ಉತ್ತರ ಪ್ರದೇಶದಲ್ಲಿನ ಹೂಡಿಕೆ ಅವಕಾಶಗಳು, ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳ ಕುರಿತು ವಿಶೇಷ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲಿ ಆಯೋಜಿಸಲಾದ ಈ ರೋಡ್ ಶೋನ ಉದ್ದೇಶ, ಉತ್ತರ ಪ್ರದೇಶದ ಅಭಿವೃದ್ಧಿ ಕಥೆಯನ್ನು ದೇಶದ ಪ್ರಮುಖ ಹೂಡಿಕೆದಾರರ ಮುಂದೆ ಪ್ರಸ್ತುತಪಡಿಸುವುದಾಗಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಹೂಡಿಕೆ ಸ್ನೇಹಿ ನೀತಿಗಳು, ಬಲಿಷ್ಠ ಮೂಲಸೌಕರ್ಯ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆ, ಎಕ್ಸ್‌ಪ್ರೆಸ್‌ವೇ ಜಾಲ, ರಕ್ಷಣಾ ಕೈಗಾರಿಕಾ ಕಾರಿಡಾರ್, ಡೇಟಾ ಸೆಂಟರ್ ಪಾರ್ಕ್‌ಗಳು, ವಿದ್ಯುತ್ ವಾಹನ ಮತ್ತು ಉತ್ಪಾದನಾ ವಲಯಗಳ ಬೆಳವಣಿಗೆಯನ್ನು ಹೂಡಿಕೆದಾರರಿಗೆ ಪರಿಚಯಿಸಲಾಯಿತು.
ಇದನ್ನೂ ಓದಿ: ಅದಾನಿ ಗ್ರೂಪ್ : ಪರಮಾಣು ಶಕ್ತಿಯಿಂದ ಬಂದರುಗಳವರೆಗೆ ವಿಸ್ತರಣೆ
ಇದೇ ವೇಳೆ, ಏಕಗವಾಕ್ಷಿ ವ್ಯವಸ್ಥೆ, ವಿಶಾಲ ಭೂ ಬ್ಯಾಂಕ್, ಕೌಶಲ್ಯಯುತ ಮಾನವ ಸಂಪನ್ಮೂಲ ಮತ್ತು ಹೂಡಿಕೆ ಪ್ರೋತ್ಸಾಹಕ ನೀತಿಗಳಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಉತ್ತರ ಪ್ರದೇಶವು ದೇಶದ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು






















