Home Advertisement
Home ತಾಜಾ ಸುದ್ದಿ ಕರ್ಮಕಾಂಡವನ್ನು ಬಯಲಿಗೆಳೆದಿದ್ದರೂ ಸಮರ್ಪಕ ಉತ್ತರವನ್ನೇಕೆ ನೀಡುತ್ತಿಲ್ಲ?

ಕರ್ಮಕಾಂಡವನ್ನು ಬಯಲಿಗೆಳೆದಿದ್ದರೂ ಸಮರ್ಪಕ ಉತ್ತರವನ್ನೇಕೆ ನೀಡುತ್ತಿಲ್ಲ?

0
143
ಅಶ್ವತ್ಥ್ ನಾರಾಯಣ್

ಏನು ಮಾಡಿಯೂ ಧಕ್ಕಿಸಿಕೊಳ್ಳುತ್ತೇವೆಂಬ ದುರಹಂಕಾರವೇ

ಬೆಂಗಳೂರು: ಸ್ಮಾರ್ಟ್ ಮೀಟರ್ ಕರ್ಮಕಾಂಡವನ್ನು ಬಯಲಿಗೆಳೆದಿದ್ದರೂ ಸಮರ್ಪಕ ಉತ್ತರವನ್ನೇಕೆ ನೀಡುತ್ತಿಲ್ಲ? ಎಂದು ಮಾಜಿ ಡಿಸಿಎಂ ಮತ್ತು ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಿಎಂ ಸಿದ್ದರಾಮಯ್ಯ ಅವರೇ ಹಾಗೂ ಇಂಧನ ಸಚಿವ ಕೆ ಜೆ ಜಾರ್ಜ್ ಅವರೇ, ಕರ್ನಾಟಕ ಬಿಜೆಪಿ ಸವಿವರವಾದ ದಾಖಲೆಗಳೊಂದಿಗೆ ನಿಮ್ಮ ಸ್ಮಾರ್ಟ್ ಮೀಟರ್ ಕರ್ಮಕಾಂಡವನ್ನು ಬಯಲಿಗೆಳೆದಿದ್ದರೂ ಸಮರ್ಪಕ ಉತ್ತರವನ್ನೇಕೆ ನೀಡುತ್ತಿಲ್ಲ?

ನಿಮ್ಮದು ಏನು ಮಾಡಿಯೂ ಧಕ್ಕಿಸಿಕೊಳ್ಳುತ್ತೇವೆಂಬ ದುರಹಂಕಾರವೇ ಅಥವಾ ಕರ್ನಾಟಕದ ಜನರನ್ನು ಸುಳ್ಳು ಹೇಳಿಯೇ ಮೂರ್ಖರನ್ನಾಗಿಸುತ್ತೇವೆಂಬ ಅತಿ ಆತ್ಮವಿಶ್ವಾಸವೇ? ಅಸಂಬದ್ಧ ಉತ್ತರಗಳನ್ನು ಕೊಟ್ಟು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು, ಕರ್ನಾಟಕ ಬಿಜೆಪಿಯ ಆರೋಪಗಳಿಗೆ ಸಮರ್ಪಕ ದಾಖಲೆಗಳನ್ನು ನೀಡಿ ಉತ್ತರಿಸಿ!

ದಾಖಲೆಗಳಿದ್ದರೆ ಅಲ್ಲವೇ, ನೀಡುವುದು! ಸಾಮಾನ್ಯ ಜನರನ್ನು ಲೂಟಿ ಮಾಡಿ ಅಧಿಕಾರದಲ್ಲಿ ಮುಂದುವರೆಯುತ್ತೀರೆಂಬ ಭ್ರಮೆಯನ್ನು ಬಿಡಿ! ಸ್ಮಾರ್ಟ್ ಮೀಟರ್ ಹಗರಣವೇ ನಿಮ್ಮ ದರೋಡೆಕೋರ ಸರ್ಕಾರದ ಅಂತ್ಯದ ಆರಂಭವಾಗಲಿದೆ, ನೆನಪಿಟ್ಟುಕೊಳ್ಳಿ!! Black listed ಕಂಪನಿಯೊಂದನ್ನು ಕರೆದು ಕರ್ನಾಟಕದ ಸಾಮಾನ್ಯ ಜನರನ್ನು ಲೂಟಿ ಮಾಡಲು ಅಧಿಕೃತವಾಗಿ ನೇಮಿಸಿರುವ ಉದಾಹರಣೆ ಇತಿಹಾಸದಲ್ಲೇ ಇದೇ ಮೊದಲು ಇರಬೇಕು. ಈ ಸ್ಮಾರ್ಟ್‌ ಮೀಟರ್‌ ಹೆಸರಿನ ದರೋಡೆಯ ಮೂಲಕ ಕರ್ನಾಟಕ ಕಾಂಗ್ರೆಸ್‌ ಹೊಸ ದಾಖಲೆಯನ್ನು ನಿರ್ಮಿಸಲು ಮುಂದಾಗಿದೆ ಎಂದಿದ್ದಾರೆ.