SK Home Ad
Home ತಾಜಾ ಸುದ್ದಿ ಮಂಜ ಮಾತು ಕೇಳಿ ಮತ್ತೆ ಕಿರಿಕಿರಿಗೊಂಡ ಗಗನ್ ಚಿನ್ನಪ್ಪ: ವಾಕ್ಸಮರಕ್ಕೆ ವೇದಿಕೆಯಾಯ್ತು ವಿಐಪಿ ಉಸ್ತುವಾರಿ!

ಮಂಜ ಮಾತು ಕೇಳಿ ಮತ್ತೆ ಕಿರಿಕಿರಿಗೊಂಡ ಗಗನ್ ಚಿನ್ನಪ್ಪ: ವಾಕ್ಸಮರಕ್ಕೆ ವೇದಿಕೆಯಾಯ್ತು ವಿಐಪಿ ಉಸ್ತುವಾರಿ!

0
11

‘ಬಿಗ್ ಬಾಸ್ ಕನ್ನಡ 13’ ಅಖಾಡದಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಕಾದಾಟ ಕಾವೇರುತ್ತಿದೆ. ‘ಅಗ್ನಿಪರೀಕ್ಷೆ’ಯಲ್ಲಿ ಗೆದ್ದು ಮನೆಗೆ ಕಾಲಿಟ್ಟಿರುವ ‘ಮಾಡ್ರನ್ ಮಹಾಕವಿ’ ಮಂಜ ಅತಿಯಾದ ಮಾತುಗಳು ಇತರ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿವೆ. ಮೊದಲ ದಿನವೇ ಕಿರಣ್ ಶಾಸ್ತ್ರಿ, ಲಿಖಿತ್ ಹಾಗೂ ಮಂಜ ವಿರುದ್ಧ ಮನೆಯವರು ಅಸಮಾಧಾನ ಹೊರಹಾಕಿದ್ದರು. ಲೈಕ್-ಡಿಸ್‌ಲೈಕ್ ಟಾಸ್ಕ್‌ನಲ್ಲಿಯೇ ಗಗನ್ ಚಿನ್ನಪ್ಪ ಮತ್ತು ಮಂಜಗೆ ನೇರವಾಗಿ ವಾರ್ನಿಂಗ್ ನೀಡಿದ್ದರು. ಇದೀಗ ಅದೇ ಹಳೆಯ ಮುನಿಸು ಹೊಸ ಟಾಸ್ಕ್‌ನಲ್ಲೂ ಮುಂದುವರಿದು ಇಬ್ಬರ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆದಿದೆ.

ಪ್ರಸ್ತುತ ನಡೆದ ‘ತಿನ್ನುವ ಟಾಸ್ಕ್’ನಲ್ಲಿ ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಮನೆಯೊಳಗಿನ ಸ್ಪರ್ಧಿಗಳಿಗೆ ಸವಾಲು ನೀಡಲಾಗಿತ್ತು. ತಮಗೆ ನೀಡಿದ ಎಲ್ಲಾ ಆಹಾರ ಪದಾರ್ಥಗಳನ್ನು ಮೊದಲು ತಿಂದು ಮುಗಿಸುವ ತಂಡ ಗೆಲ್ಲುತ್ತದೆ ಎಂಬ ನಿಯಮವಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರ ತಂಡದಿಂದ ಕೆಟ್ಟದಾಗಿ ತಯಾರಿಸಿದ ತಿಂಡಿಗಳನ್ನು ತಿನ್ನಲು ಲಿಖಿತ್ ಮತ್ತು ಮಂಜ ಬಂದಿದ್ದರೆ, ಮನೆಯೊಳಗಿನ ಸ್ಪರ್ಧಿಗಳ ತಂಡದಿಂದ ಜಗದೀಶ್ ಹಾಗೂ ಓಂ ಪ್ರಕಾಶ್ ರಾವ್ ಕಣಕ್ಕಿಳಿದಿದ್ದರು. ಟಾಸ್ಕ್ ಆರಂಭದಲ್ಲೇ “ಎಲ್ಲವನ್ನೂ ಬಡಿದು ಬಾಯಿಗೆ ಹಾಕಿಕೊಂಡು ತೇಗಿ ಹೋಗುತ್ತೇನೆ” ಎಂದು ಮಂಜ ಪೂರ್ಣ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದರು.

ವಿಐಪಿ ಸ್ಟೇಟಸ್ ಹೊಂದಿದ್ದ ಗಗನ್ ಚಿನ್ನಪ್ಪ ಈ ಟಾಸ್ಕ್‌ನ ಉಸ್ತುವಾರಿ ವಹಿಸಿಕೊಂಡಿದ್ದರು. ಆಟದ ಮಧ್ಯೆ ಮಂಜ ಮಾತು ಬೆಳೆಸಿದಾಗ ಕೋಪಗೊಂಡ ಗಗನ್, “ಅಧಿಕ ಪ್ರಸಂಗ ಮಾತಾಡಬೇಡ, ಈಗಲೇ ಹೇಳುತ್ತಿದ್ದೇನೆ” ಎಂದು ನೇರವಾಗಿಯೇ ಗದರಿದರು. ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಮಂಜ, “ಆರಾಮಾಗಿ ಮಾತಾಡು” ಎಂದರು. ಗಗನ್ ಮತ್ತಷ್ಟು ಏರಿದ ಧ್ವನಿಯಲ್ಲಿ “ಸೈಡ್‌ಗೆ ಹೋಗ್ರಿ” ಎಂದಾಗ, “ಆರಾಮಾಗಿ.. ಹಾ.. ಅದೇ ಬೇಸ್ ವಾಯ್ಸ್.. ನಮ್ಮದೂನೂ ಇದೆ” ಎಂದು ಮಂಜ ಟಾಂಟ್ ನೀಡಿದರು. ಇಬ್ಬರ ನಡುವಿನ ಈ ಜಗಳ ಪ್ರೇಕ್ಷಕರ ಗಮನ ಸೆಳೆದಿದೆ.

ಒಟ್ಟಾರೆಯಾಗಿ.. ಅಂತಿಮವಾಗಿ ಈ ಕಠಿಣ ತಿನ್ನುವ ಟಾಸ್ಕ್‌ನಲ್ಲಿ ಮಂಜ ಹಾಗೂ ಲಿಖಿತ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಗೆಲುವಿನಿಂದಾಗಿ ವಿಮಾನದಲ್ಲಿದ್ದ ಮಂಜ ಪ್ರಮುಖ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟು ಸುರಕ್ಷಿತ ವಲಯ (ಸೇಫ್ ಝೋನ್) ತಲುಪಿದ್ದಾರೆ. ಮತ್ತೊಂದೆಡೆ, ಸೋತ ಓಂ ಪ್ರಕಾಶ್ ರಾವ್ ಮತ್ತೆ ವಿಮಾನವನ್ನು ಏರುವ ಮೂಲಕ ಡೇಂಜರ್ ಝೋನ್ ಪಟ್ಟಿಗೆ ಸೇರಿದ್ದಾರೆ.