BBK13: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 13’ ಪ್ರಾರಂಭವಾದ ಮೊದಲ ದಿನವೇ ಭಾರಿ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಪ್ರಸಾರ ಆರಂಭ ಬೆನ್ನಲ್ಲೇ ಸ್ಪರ್ಧಿಗಳಿಗೆ ಸವಾಲುಗಳು ಎದುರಾಗಿದ್ದು, ಮೊದಲ ದಿನವೇ ಹಲವು ಸ್ಪರ್ಧಿಗಳು ನಾಮಿನೇಷನ್ ಪಟ್ಟಿಗೆ ಸೇರಿದ್ದಾರೆ.
ಈ ಬಾರಿಯ ಸೀಸನ್ ಆರಂಭದಲ್ಲೇ ದೊಡ್ಮನೆಯ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಪ್ರಮುಖ ಸ್ಪರ್ಧಿಗಳಾದ ಮಂಜ, ಅವಿನಾಶ್, ಲಿಖಿತ್, ಧನುಷ್, ಕಿರಣ್ ಶಾಸ್ತ್ರಿ, ವೈಷ್ಣವಿ, ಸೌಂದರ್ಯಾ ಶೆಟ್ಟಿ ಹಾಗೂ ಪ್ರಥಮಾ ಪ್ರಸಾದ್ ಮೊದಲ ದಿನವೇ ನಾಮಿನೇಟ್ ಆಗಿರುವ ಸ್ಪರ್ಧಿಗಳಾಗಿದ್ದಾರೆ. ಈ ನಾಮಿನೇಷನ್ ಮನೆಯ ವಾತಾವರಣದಲ್ಲಿ ತೀವ್ರ ಕುತೂಹಲ ಮತ್ತು ಆತಂಕವನ್ನು ಸೃಷ್ಟಿಸಿದೆ.
ಇದಕ್ಕೂ ಮಿಗಿಲಾಗಿ, ನಾಮಿನೇಟ್ ಆಗಿರುವ ಈ ಸ್ಪರ್ಧಿಗಳ ಪೈಕಿ ಒಬ್ಬರು ಬಿಗ್ ಬಾಸ್ ಮುಖ್ಯ ಮನೆಯೊಳಗೆ ಕಾಲಿಡುವ ಮುನ್ನವೇ ಎಲಿಮಿನೇಟ್ ಆಗಲಿದ್ದಾರೆ ಎಂಬ ಸೂಚನೆಯನ್ನು ನೀಡಲಾಗಿದೆ. ಈ ಪ್ರಮುಖ ತಿರುವು ಶೋಗೆ ಹೊಸ ಮೆರುಗು ನೀಡಿದ್ದು, ವೀಕ್ಷಕರಲ್ಲೂ ಭಾರಿ ಕುತೂಹಲ ಮೂಡಿಸಿದೆ. ಮೊದಲ ದಿನವೇ ಇಂತಹ ಕಠಿಣ ನಿರ್ಧಾರ ಎದುರಾಗಿರುವುದರಿಂದ ಆಟದ ಕಾವು ಏರಿದೆ.
ಆರಂಭದಲ್ಲೇ ಇಂತಹ ಟ್ವಿಸ್ಟ್ ಸಿಕ್ಕಿರುವುದು ಬಿಗ್ ಬಾಸ್ ಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆ ಹೆಚ್ಚಿಸಿದೆ. ಈಗ ಮೊದಲ ದಿನವೇ ಮನೆಯಿಂದ ಹೊರಬೀಳುವ ಆ ಒಬ್ಬ ಸ್ಪರ್ಧಿ ಯಾರು? ಎನ್ನುವುದಕ್ಕೆ ಇನ್ನೂ ಕುತೂಹಲದಿಂದ ಕಾಯಬೇಕಿದೆ.





















