SK Home Ad
Home ತಾಜಾ ಸುದ್ದಿ ಸಿನಿಮಿಯ ಮಾದರಿಯಲ್ಲಿ ತಾಳಿಸರ ಎಗರಿಸಿದ ಕಳ್ಳರು

ಸಿನಿಮಿಯ ಮಾದರಿಯಲ್ಲಿ ತಾಳಿಸರ ಎಗರಿಸಿದ ಕಳ್ಳರು

0
202

ಇಳಕಲ್: ಸಿನಿಮಯ ಮಾದರಿಯಲ್ಲಿಯೇ ಮಹಿಳೆಯ ಕೊರಳಲ್ಲಿನ ಬಂಗಾರದ ತಾಳಿಸರವನ್ನು ಚಾಲಾಕಿ ಕಳ್ಳರು ಎಗರಿಸಿದ ಪ್ರಸಂಗ ಗುರುವಾರ ನಸುಕಿನ ಸಮಯದಲ್ಲಿ ನಡೆದಿದೆ.
ನಗರದ ಮೂಲ ಸ್ಥಳವಾದ ಕಿಲ್ಲಾ ಪ್ರದೇಶದಲ್ಲಿ ವಾಸಿಸುವ ರಾಜು ಅಕ್ಕಿ ಇವರ ಪತ್ನಿ ಸಪ್ನಾ ಬೆಳಿಗ್ಗೆ ೫-೩೦ ರ ಸಮಯದಲ್ಲಿ ಕಸ ಚೆಲ್ಲಲು ರಸ್ತೆಗೆ ಬಂದಾಗ ಬೈಕ್ ಮೇಲೆ ಬಂದ ಇಬ್ಬರು ಕಳ್ಳರು ಸಪ್ನಾಳ ಕೊರಳಿಗೆ ಕೈ ಹಾಕಿ ತಾಳಿಸರ ಕಿತ್ತಿಕೊಳ್ಳಲು ಹೋದಾಗ ಅವಳು ತಾಳಿಯನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆದರೂ ಕಳ್ಳರು ಬಲವಾಗಿ ಸುಮಾರು ೨೫ ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹೋದಾಗ ತಾಳಿಯ ಪದಕಗಳು ಮಾತ್ರ ಸಪ್ನಾರವರ ಕೈಯಲ್ಲಿ ಉಳಿದಿವೆ. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಅಪರಾಧ ವಿಭಾಗದ ಪಿಎಸ್ ಐ ಶಾಂತಾ ಹಳ್ಳಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.