Home Advertisement
Home ತಾಜಾ ಸುದ್ದಿ ಚೈತ್ರಾ ಕುಂದಾಪುರ ಕೇಸ್‌ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ

ಚೈತ್ರಾ ಕುಂದಾಪುರ ಕೇಸ್‌ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ

0
166
ಆರ್‌ಎಸ್ಎಸ್

ಮಂಗಳೂರು: ಚೈತ್ರಾ ಕುಂದಾಪುರ ಕೇಸ್‌ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚೈತ್ರಾ ಕುಂದಾಪುರ ಡೀಲ್ ಪ್ರಕರಣ ಸಂಬಂಧ ಮಾತನಾಡಿರುವ ಅವರು ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ, ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು.
ಟಕೆಟ್ ಕೊಡಿಸ್ತೀವಿ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸುತ್ತೇವೆ, ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟ. ಹೋರಾಟ ಹಲವರು ಮಾಡುತ್ತಾರೆ, ಹಾಗಂತ ಅದಕ್ಕೆಲ್ಲವಕ್ಕೂ ಪಕ್ಷಕ್ಕೆ ಸಂಬಂಧ ಇಲ್ಲ ತನಿಖೆ ಆಗಲಿ ಎಲ್ಲಾ ಸ್ಷಷ್ಟವಾಗಲಿದೆ, ದೊಡ್ಡ ದೊಡ್ಡ ಹೆಸರು ಇದೆ ಅಂತ ಈಗ ಅಪರಾಧಿ ಸ್ಥಾನದಲ್ಲಿ ಇದ್ದವರು ಹೇಳುತ್ತಾರೆ, ಅದು ತನಿಖೆ ಆಗಿ ಅದರ ಸತ್ಯ ಹೊರ ಬರಲಿ ಎಂದರು.