SK Home Ad
Home ತಾಜಾ ಸುದ್ದಿ ಕಾಂಗ್ರೆಸ್‌ಗೆ ಯಾತ್ರೆ ಶಬ್ದ ಕಲಿಸಿದ್ದೇ ಬಿಜೆಪಿ

ಕಾಂಗ್ರೆಸ್‌ಗೆ ಯಾತ್ರೆ ಶಬ್ದ ಕಲಿಸಿದ್ದೇ ಬಿಜೆಪಿ

0
322
kateel

ಧಾರವಾಡ: ಸಿದ್ದರಾಮಯ್ಯ ಅವರು ನಮ್ಮ ಯಡಿಯೂರಪ್ಪ ಅವರಿಗೆ ಕನಿಷ್ಠ ಎರಡು ಕಿ.ಮೀ ಆದರೂ ನಡೆಯಬೇಕು ಎಂದು ಹೇಳುತ್ತಾರೆ. ಆದರೆ, ಯಾತ್ರೆ ಎನ್ನುವ ಪದವನ್ನು ಕಾಂಗ್ರೆಸ್ ಕಲಿತಿದ್ದೇ ಬಿಜೆಪಿಯಿಂದ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ರಾಜ್ಯದಲ್ಲಿ ಪಾದಯಾತ್ರೆ, ಸೈಕಲ್ ಯಾತ್ರೆ ಮಾಡಿದಷ್ಟು ಯಾರೂ ಮಾಡಿಲ್ಲ. ಮಾಡುವುದಕ್ಕೂ ಆಗುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಅರಳು ಮರಳು ಶುರುವಾಗಿದೆ. ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಅವರು ಹುಚ್ಚರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಎಲ್ಲಿ ಡಿ.ಕೆ. ಶಿವಕುಮಾರ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೋ ಎನ್ನುವ ಭಯ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ ಎಂದು ಲೇವಡಿ ಮಾಡಿದರು.