SK Home Ad
Home ಸಿನಿ ಮಿಲ್ಸ್ ‘ಪ್ರೇಮದ ಊರಲಿ’ ಚಿತ್ರಕ್ಕೆ ಭರ್ಜರಿ ಗೆಲುವು: ಸಕ್ಸಸ್ ಮೀಟ್‌ನಲ್ಲಿ ಕಣ್ಣೀರಿಟ್ಟ ಚಿತ್ರತಂಡ

‘ಪ್ರೇಮದ ಊರಲಿ’ ಚಿತ್ರಕ್ಕೆ ಭರ್ಜರಿ ಗೆಲುವು: ಸಕ್ಸಸ್ ಮೀಟ್‌ನಲ್ಲಿ ಕಣ್ಣೀರಿಟ್ಟ ಚಿತ್ರತಂಡ

0
6

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಸಕ್ಸಸ್ ಮೀಟ್ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಚಿತ್ರದ ನಾಯಕ ಶ್ರೀರಾಮ್, ನಿರ್ದೇಶಕ ಮನೋಜ್ ಕುಮಾರ್, ಹಿರಿಯ ನಟ ರಂಗಾಯಣ ರಘು ಹಾಗೂ ನಾಯಕಿಯರಾದ ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಸೇರಿದಂತೆ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿ ಗೆಲುವಿನ ಹರ್ಷ ಹಂಚಿಕೊಂಡಿತು.

ಮಾತನಾಡಿದ ನಾಯಕ ನಟ ಶ್ರೀರಾಮ್, “ಈ ಚಿತ್ರಕ್ಕಾಗಿ ಸತತ ಮೂರು ವರ್ಷ ಶ್ರಮಿಸಿದ್ದೇವೆ. ಪ್ರೇಕ್ಷಕರು ತೋರುತ್ತಿರುವ ಪ್ರೀತಿ ನೋಡಿ ಕಣ್ಣೀರು ತಡೆಯಲಾಗುತ್ತಿಲ್ಲ. ಇದು ನಿರ್ದೇಶಕ ಮನೋಜ್ ಅವರ 18 ವರ್ಷಗಳ ಶ್ರಮ ಮತ್ತು ಮನೆ ಮನೆಗೆ ಪೇಪರ್ ಹಾಕಿ ಬೆಳೆದ ನಿರ್ಮಾಪಕ ದೇವೇಂದ್ರ ಅವರ ನಂಬಿಕೆಗೆ ಸಿಕ್ಕ ಪ್ರತಿಫಲ” ಎಂದು ಭಾವುಕರಾದರು.

ಹಿರಿಯ ನಟ ರಂಗಾಯಣ ರಘು ಇಡೀ ತಂಡದೊಂದಿಗೆ ಎದ್ದು ನಿಂತು ಪ್ರೇಕ್ಷಕರಿಗೆ ನಮಸ್ಕರಿಸಿ, “ಕನ್ನಡ ಪ್ರೇಕ್ಷಕರು ಸದಾ ಹೊಸ ಪ್ರಯತ್ನಗಳನ್ನು ಬೆಳೆಸಿದ್ದಾರೆ. ದೊಡ್ಡ ಸಿನಿಮಾಗಳ ಜೊತೆಗೆ ಸಣ್ಣ ಸಿನಿಮಾಗಳಿಗೂ ಜೀವ ನೀಡಿದ ಪ್ರೇಕ್ಷಕ ಮಹಾಪ್ರಭುಗಳ ಋಣ ಎಂದಿಗೂ ತೀರದು” ಎಂದರು. ನಿರ್ದೇಶಕ ಮನೋಜ್ ಕುಮಾರ್ ತಮ್ಮ ಸಂಕಷ್ಟದ ದಿನಗಳಲ್ಲಿ ರಂಗಾಯಣ ರಘು ನೀಡಿದ ಬೆಂಬಲವನ್ನು ಸ್ಮರಿಸಿದರೆ, ನಟಿಯರಾದ ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ತಮ್ಮ ಅಭಿನಯಕ್ಕೆ ಸಿಕ್ಕ ಮೆಚ್ಚುಗೆಗೆ ಕೃತಜ್ಞತೆ ಸಲ್ಲಿಸಿದರು.