SK Home Ad
Home ಸಿನಿ ಮಿಲ್ಸ್ Zee5ನಲ್ಲಿ ‘ಕರಾವಳಿ’ ಸ್ಟ್ರೀಮಿಂಗ್ ಆರಂಭ; ಕಂಬಳದ ಕಥೆಗೆ ಜಾಗತಿಕ ವೇದಿಕೆ

Zee5ನಲ್ಲಿ ‘ಕರಾವಳಿ’ ಸ್ಟ್ರೀಮಿಂಗ್ ಆರಂಭ; ಕಂಬಳದ ಕಥೆಗೆ ಜಾಗತಿಕ ವೇದಿಕೆ

0
19

 ಬೆಂಗಳೂರು : ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ ‘ಕರಾವಳಿ’ ಚಿತ್ರದ ಡಿಜಿಟಲ್ ಪ್ರೀಮಿಯರ್  ಅಧಿಕೃತವಾಗಿ ಆರಂಭವಾಗಿದೆ. ಕರಾವಳಿ ಭಾಗದ ಜನಪ್ರಿಯ ಜಾನಪದ ಕ್ರೀಡೆ ‘ಕಂಬಳ’ದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರವು ಆಗಸ್ಟ್ 28 ರಿಂದ ಪ್ರಮುಖ ಒಟಿಟಿ ವೇದಿಕೆಯಾದ ‘ಝೀ5’ (Zee5) ನಲ್ಲಿ ಜಾಗತಿಕವಾಗಿ ಪ್ರಸಾರವಾಗುತ್ತಿದೆ.

ಗುರುದತ್ತ ಗಾಣಿಗ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ.

ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ಸ್ ಹಾಗೂ ಸುರಮ್ ಮೂವೀಸ್ ಈ ಚಿತ್ರಕ್ಕೆ ಸಹ-ನಿರ್ಮಾಣದ ಸಾಥ್ ನೀಡಿವೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಕಂಬಳ, ಸಂಸ್ಕೃತಿ ಮತ್ತು ಬಾಂಧವ್ಯದ ಕಥಾಹಂದರ

​ಕರಾವಳಿ ಕರ್ನಾಟಕದ ಸೊಗಡು, ಆಚರಣೆ ಹಾಗೂ ಪರಂಪರೆಯನ್ನು ತೆರೆಯ ಮೇಲೆ ತಂದಿರುವ ಈ ಚಿತ್ರದಲ್ಲಿ ಕಂಬಳವು ಕೇವಲ ಕ್ರೀಡೆಯಾಗಿರದೆ, ಜನರ ಅಸ್ಮಿತೆ ಮತ್ತು ಬಾಂಧವ್ಯದ ಭಾಗವಾಗಿ ಬಿಂಬಿತವಾಗಿದೆ. ತಲೆಮಾರುಗಳ ನಡುವಿನ ಸಂಘರ್ಷ, ಮಹತ್ವಾಕಾಂಕ್ಷೆ ಮತ್ತು ಸಂಬಂಧಗಳ ತೀವ್ರತೆಯನ್ನು ಒಳಗೊಂಡಿರುವ ಚಿತ್ರಕಥೆ ಪ್ರೇಕ್ಷಕರಿಗೆ ವಿಶಿಷ್ಟ ಸಿನಿಮೀಯ ಅನುಭವವನ್ನು ನೀಡಲಿದೆ.

ನಿರ್ದೇಶಕ ಗುರುದತ್ತ ಗಾಣಿಗ ಏನಂದ್ರು?

“ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಜನರ ನೈಜ ಜೀವನವನ್ನು ಕಟ್ಟಿಕೊಡುವ ಪ್ರಯತ್ನವಿದು. ಕಂಬಳದ ಶಕ್ತಿ ಮತ್ತು ಭಾವನೆಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸಲು zee5 ಸೂಕ್ತ ವೇದಿಕೆಯಾಗಿದೆ” ಎನ್ನುತ್ತಾರೆ.

​ನಟ ರಾಜ್ ಬಿ. ಶೆಟ್ಟಿ ಹೇಳಿದ್ದೇನು?

“ಕರಾವಳಿಯ ಮಣ್ಣಿನ ಕಥೆಯನ್ನು ಒಳಗೊಂಡಿರುವ ಈ ಚಿತ್ರ ನನಗೆ ಅತ್ಯಂತ ಆಪ್ತ. ಕಂಬಳದ ಶಕ್ತಿ ಮತ್ತು ಸಾಂಸ್ಕೃತಿಕ ತೀವ್ರತೆಯನ್ನು ಪರದೆಯ ಮೇಲೆ ತರುವುದು ಉತ್ತಮ ಅನುಭವವಾಗಿತ್ತು” ಎಂದು ಹೇಳಿದ್ದಾರೆ.

​zee5 ವೇದಿಕೆಯ ಬದ್ಧತೆ

ಕರ್ನಾಟಕದ ಪ್ರಾದೇಶಿಕ ಮತ್ತು ಸಂಸ್ಕೃತಿ ಆಧಾರಿತ ಕಥೆಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ‘ಕರಾವಳಿ’ ಪ್ರಸಾರ ಮಹತ್ವದ ಹೆಜ್ಜೆಯಾಗಿದೆ ಎಂದು Zee5 ತಿಳಿಸಿದೆ. 190ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿರುವ zee5, ಕನ್ನಡ ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಮನರಂಜನೆ ನೀಡುತ್ತಿದ್ದು, ಇತ್ತೀಚೆಗೆ ಫಿಫಾ ವಿಶ್ವಕಪ್‌ನಂತಹ ಜಾಗತಿಕ ಕ್ರೀಡಾಕೂಟಗಳ ಪ್ರಸಾರ ಹಕ್ಕನ್ನೂ ಹೊಂದಿದೆ.