SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಮನೆಯ ಆಸೆ ಈಗ ಈಡೇರಿತು: ಜನ್ಮದಿನದಂದೇ ‘ಪಳಾರ್’ ಮಾಸ್ ಲುಕ್‌ನಲ್ಲಿ ಬಂದ ಗಿಲ್ಲಿ...

ಬಿಗ್ ಬಾಸ್ ಮನೆಯ ಆಸೆ ಈಗ ಈಡೇರಿತು: ಜನ್ಮದಿನದಂದೇ ‘ಪಳಾರ್’ ಮಾಸ್ ಲುಕ್‌ನಲ್ಲಿ ಬಂದ ಗಿಲ್ಲಿ ನಟ!

0
28

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ, ಜನಪ್ರಿಯ ಹಾಸ್ಯ ನಟನಾಗಿ ಖ್ಯಾತಿ ಪಡೆದಿರುವ ನಟರಾಜ, ‘ಗಿಲ್ಲಿ ನಟ’ ಈಗ ಚಿತ್ರರಂಗದಲ್ಲಿ ಹೀರೊ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಇಂದು ಗಿಲ್ಲಿ ನಟನ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ನಾಯಕರಾಗಿ ನಟಿಸಲಿರುವ ಚೊಚ್ಚಲ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ‘ಪಳಾರ್’ ಎಂದು ಹೆಸರಿಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ತಮ್ಮನ್ನು ಎಲ್ಲರೂ ‘ಪಳಾರ್ ಗಿಲ್ಲಿ’ ಎಂದು ಕರೆಯಬೇಕೆಂದು ಆಸೆ ವ್ಯಕ್ತಪಡಿಸಿದ್ದರು. ಈಗ ಗಿಲ್ಲಿ ನಟನ ಆಸೆಯಂತೆಯೇ ಚಿತ್ರಕ್ಕೆ ಈ ಮಾಸ್ ಟೈಟಲ್ ಇಡಲಾಗಿದೆ.

ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇಂದು ‘ಪಳಾರ್’ ಚಿತ್ರದ ಭವ್ಯ ಮುಹೂರ್ತ ನೆರವೇರಿತು. ನಟ ರವಿಚಂದ್ರನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಚಿತ್ರತಂಡದ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಗಿಲ್ಲಿ ನಟ ಜನ್ಮದಿನವನ್ನು ಆಚರಿಸಲಾಯಿತು. ಚಿತ್ರದ ಫಸ್ಟ್‌ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಗಿಲ್ಲಿ ನಟ ಪಂಚೆ-ಶರ್ಟ್ ಧರಿಸಿ ಮಾಸ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಹಾಸ್ಯಭರಿತವಾಗಿ ‘ಪ್ಯಾನ್ ಕರ್ನಾಟಕ ಮೂವಿ’ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ… “ಗಿಲ್ಲಿ ನಟ ನಟನೆಯ ಈ ಸಿನಿಮಾಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ” ಎಂದು ಕೆವಿಎನ್ ಸಂಸ್ಥೆಯ ಕೆ. ವೆಂಕಟ ನಾರಾಯಣ ಈಗಾಗಲೇ ಭರವಸೆ ನೀಡಿದ್ದಾರೆ. ಬಿಗ್ ಬಾಸ್ ಗೆದ್ದ ನಂತರ ಸಾಲು ಸಾಲು ಆಫರ್‌ಗಳನ್ನು ಪಡೆಯುತ್ತಿರುವ ಗಿಲ್ಲಿ ನಟನ ಸಿನಿ ಪಯಣಕ್ಕೆ ‘ಪಳಾರ್’ ಚಿತ್ರ ದೊಡ್ಡ ಮೈಲಿಗಲ್ಲಾಗುವ ಮುನ್ಸೂಚನೆ ನೀಡಿದೆ.