SK Home Ad
Home ಸಿನಿ ಮಿಲ್ಸ್ ದೊಡ್ಮನೆಯಲ್ಲಿ ಗಾನವಿ ‘ಎರಡು ಮುಖದ’ ಆಟ, ಮತ್ತೆ ಹಳೆಯ ಚಾಳಿ ಮುಂದುವರಿಸಿದ ಮಂಜ: ವೀಕೆಂಡ್‌ನಲ್ಲಿ ಕಿಚ್ಚನ...

ದೊಡ್ಮನೆಯಲ್ಲಿ ಗಾನವಿ ‘ಎರಡು ಮುಖದ’ ಆಟ, ಮತ್ತೆ ಹಳೆಯ ಚಾಳಿ ಮುಂದುವರಿಸಿದ ಮಂಜ: ವೀಕೆಂಡ್‌ನಲ್ಲಿ ಕಿಚ್ಚನ ರೆಡ್ ಕಾರ್ಡ್ ಪಕ್ಕಾನಾ?

0
19

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಒಂದೆಡೆ ಗಾನವಿ ಗೌಡ ಅವರು ಸಹ ಸ್ಪರ್ಧಿ ಜಗದೀಶ್ ಅವರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿ ಬಳಿಕ ತಾವೇ ಸಂತ್ರಸ್ತೆಯಂತೆ ಡ್ರಾಮಾ ಮಾಡುತ್ತಿರುವುದು ಮನೆಮಂದಿಗೆ ಶಾಕ್ ನೀಡಿದ್ದರೆ, ಮತ್ತೊಂದೆಡೆ ಅತಿಥಿಯಾಗಿ ಮನೆಗೆ ಮರಳಿರುವ ‘ಮಾಡರ್ನ್ ಮಹಾಕವಿ’ ಮಂಜ ಮತ್ತೆ ಅಸಭ್ಯ ಭಾಷೆ ಬಳಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜಗಳದ ವೇಳೆ ಗಾನವಿ ಅವರು ಜಗದೀಶ್ ಅವರನ್ನು ಉದ್ದೇಶಿಸಿ, “ನೀನು ವಠಾರದ ಆಂಟಿಯ ರೀತಿ ಇದ್ದೀಯ, ಮೊದಲು ಗಂಡಸಾಗಿ ಮಾತನಾಡುವುದನ್ನು ಕಲಿ” ಎಂದು ಕೀಳಾಗಿ ಟೀಕಿಸಿದ್ದಾರೆ. ಈ ಹಿಂದೆ ಇಂತಹ ಮಾತುಗಳಿಗೆ ಕಿಚ್ಚ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರೂ, ಗಾನವಿ ಮತ್ತೆ ಅದೇ ಪದಗಳನ್ನು ಬಳಸಿದ್ದಾರೆ. ಇದರಿಂದ ಕೆರಳಿದ ಜಗದೀಶ್ “ಮಾನ ಗೆಟ್ಟವಳು ನೀನು” ಎಂದು ತಿರುಗೇಟು ನೀಡುತ್ತಿದ್ದಂತೆಯೇ ವರಸೆ ಬದಲಿಸಿದ ಗಾನವಿ, ತಾವೇ ಸಂತ್ರಸ್ತೆಯಂತೆ ಕೂಗಾಡುತ್ತಾ ಡ್ರಾಮಾ ಶುರು ಮಾಡಿದ್ದಾರೆ.

ಇನ್ನೊಂದೆಡೆ, ಈ ಹಿಂದೆ ಅಸಭ್ಯ ವರ್ತನೆಯಿಂದ ಹೊರಹೋಗಿದ್ದ ಮಂಜ ಅವರಿಗೆ ತಿದ್ದಿಕೊಳ್ಳಲು ಸುದೀಪ್ ಮತ್ತೊಂದು ಅವಕಾಶ ನೀಡಿ ಅತಿಥಿಯಾಗಿ ಕಳುಹಿಸಿದ್ದರು. “ಮತ್ತೆ ತಪ್ಪು ಮಾಡಿದರೆ ರೆಡ್ ಕಾರ್ಡ್ ನೀಡಿ ಹೊರಹಾಕಲಾಗುವುದು” ಎಂದು ಸುದೀಪ್ ಎಚ್ಚರಿಕೆ ನೀಡಿದ್ದರೂ, ಮಂಜ ತಮ್ಮ ಹಳೆಯ ಚಾಳಿಯನ್ನೇ ಮುಂದುವರಿಸಿ ಸಹ ಸ್ಪರ್ಧಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದಾರೆ.

ಸದ್ಯ ಗಾನವಿ ಅವರ ದ್ವಿಮುಖ ನೀತಿ ಹಾಗೂ ಮಂಜ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಕ್ಕ ಅವಕಾಶವನ್ನು ದುರುಪಯೋಗಪಡಿಸಿಕೊಂಡಿರುವ ಮಂಜ ಅವರಿಗೆ ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ರೆಡ್ ಕಾರ್ಡ್ ನೀಡಿ ಗೇಟ್ ಪಾಸ್ ಕೊಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.