BBK 13: ಬಿಗ್ಬಾಸ್ ಮನೆಯಿಂದ ಮಿಡ್ವೀಕ್ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಬಿದ್ದು, ಆ ಬಳಿಕ ಕಿಚ್ಚ ಸುದೀಪ್ ನೀಡಿದ ವಿಶೇಷ ಅವಕಾಶದಿಂದಾಗಿ ಸೀಕ್ರೆಟ್ ರೂಮ್ನಲ್ಲಿದ್ದ ತಾಂಡವ್ ರಾಮ್ ಇದೀಗ ಮತ್ತೆ ದೊಡ್ಮನೆಗೆ ಮರಳಿದ್ದಾರೆ. ಪ್ರೇಕ್ಷಕರ ಮತಗಳ ಆಧಾರದ ಮೇಲೆ ಎವಿಕ್ಷನ್ನಿಂದ ಪಾರಾಗಿ ವಾಪಸಾದ ತಾಂಡವ್, “ಇನ್ಮುಂದೆ ನನ್ನಿಂದ ಒಳ್ಳೆಯತನ ನಿರೀಕ್ಷಿಸಬೇಡಿ” ಎಂದು ಖಡಕ್ ಎಚ್ಚರಿಕೆ ನೀಡುವ ಮೂಲಕವೇ ಆಟ ಆರಂಭಿಸಿದರು.
ಮನೆಗೆ ಬಂದ ತಕ್ಷಣವೇ ಬಿಗ್ಬಾಸ್ ತಾಂಡವ್ಗೆ ಒಂದು ಕಠಿಣ ಟಾಸ್ಕ್ ನೀಡಿದರು. ‘ಹೊಟ್ಟೆಕಿಚ್ಚಿನವರು’, ‘ಮುಖವಾಡ ಧರಿಸಿದವರು’, ‘ಗೆಳೆತನವನ್ನು ಲಾಭಕ್ಕೆ ಬಳಸಿಕೊಳ್ಳುವವರು’ ಮತ್ತು ‘ಬೇರೆಯವರ ನೆರಳಿನಲ್ಲಿ ಇರುವವರು’ ಎಂಬ ಬರಹಗಳಿದ್ದ ಫಲಕಗಳನ್ನು ಸ್ಪರ್ಧಿಗಳಿಗೆ ನೀಡಬೇಕಿತ್ತು. ತಾಂಡವ್ ಈ ಫಲಕಗಳನ್ನು ಸೌಂದರ್ಯ, ಜಗ್ಗ, ಕಿರಣ್ ಶಾಸ್ತ್ರಿ ಮತ್ತು ಆಸಿಯಾಗೆ ನೀಡಿದರು. ಇದರಿಂದ ಅಸಮಾಧಾನಗೊಂಡ ಸೌಂದರ್ಯ, ಜಗ್ಗ ಮತ್ತು ಕಿರಣ್ ತಮಾಷೆಯಾಗಿ ಆ ಫಲಕಗಳನ್ನು ಕ್ಯಾಮೆರಾಗೆ ತೋರಿಸುತ್ತಾ ‘ತಾಂಡವ್ಗೆ ಧಿಕ್ಕಾರ’ ಎಂದು ಕೂಗಿದರು.
ಆದ್ರೆ ‘ಲಾಭಕ್ಕಾಗಿ ಸ್ನೇಹ ಮಾಡುವವರು’ ಎಂಬ ಫಲಕ ಪಡೆದ ಆಸಿಯಾ ತೀವ್ರ ಬೇಸರ ವ್ಯಕ್ತಪಡಿಸಿದರು. ತಾಂಡವ್ ಹೊರಹೋಗಿದ್ದಾಗ ಬೇಸರಪಟ್ಟು, ವಾಪಸ್ ಬಂದಾಗ ಸಂಭ್ರಮಿಸಿದ್ದ ಆಸಿಯಾ, ತಾಂಡವ್ ಕೊಟ್ಟಿದ್ದ ಚಾಕೊಲೇಟ್ನ್ನು ಮರಳಿಸಿ ತಮ್ಮ ಕೋಪ ಪ್ರದರ್ಶಿಸಿದರು. ಒಟ್ಟಾರೆ.. ಸೀಕ್ರೆಟ್ ರೂಮ್ನಿಂದ ಬಂದ ತಾಂಡವ್ ನೀಡಿದ ಟಾಸ್ಕ್ ಫಲಕಗಳು ಅವರ ಆಪ್ತ ಸ್ನೇಹಿತರಲ್ಲೇ ಮುನಿಸು ತಂದಿಟ್ಟಿವೆ.






















