SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್ ಕನ್ನಡ 13: ಮದುವೆ ವಿಚಾರ ಪ್ರಸ್ತಾಪಿಸಿದ ಸೌಂದರ್ಯ ಶೆಟ್ಟಿ; ಬ್ರೇಕಪ್ ಕಹಾನಿ ನೆನೆದು...

ಬಿಗ್‌ ಬಾಸ್ ಕನ್ನಡ 13: ಮದುವೆ ವಿಚಾರ ಪ್ರಸ್ತಾಪಿಸಿದ ಸೌಂದರ್ಯ ಶೆಟ್ಟಿ; ಬ್ರೇಕಪ್ ಕಹಾನಿ ನೆನೆದು ‘ಬೆಸ್ಟಿ’ ಯಶಸ್‌ಗೆ ಹೇಳಿದ್ದೇನು?

0
7

‘ಎಂಟಿವಿ ರೋಡೀಸ್’ ಹಾಗೂ ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಶೋಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸೌಂದರ್ಯ ಶೆಟ್ಟಿ, ಈಗ ‘ಬಿಗ್‌ ಬಾಸ್‌ ಕನ್ನಡ ಸೀಸನ್-13’ರಲ್ಲಿ ಪ್ರಮುಖ ಸ್ಪರ್ಧಿಯಾಗಿ ಗಮನ ಸೆಳೆಯುತ್ತಿದ್ದಾರೆ. ಹಿಂದಿನ ಶೋಗಳಲ್ಲಿ ತಮ್ಮ ಧೀಮಂತ ಶೈಲಿ ಹಾಗೂ ‘ಡಾನ್’ ಇಮೇಜ್‌ನಿಂದ ಪ್ರಸಿದ್ಧರಾಗಿದ್ದ ಇವರನ್ನು, ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಘಾಟಿ ಗಾನವಿ ಗೌಡ ಕೂಡ ಅದೇ ಹೆಸರಿನಿಂದ ಕರೆಯುತ್ತಾರೆ. ಮೂಲತಃ ಮಂಗಳೂರಿನವರಾದ ಸೌಂದರ್ಯ ಕುಟುಂಬ ಪ್ರಸ್ತುತ ಮುಂಬೈನಲ್ಲಿ ನೆಲೆಯೂರಿದೆ. 26 ವರ್ಷದ ಸೌಂದರ್ಯ ಅವರಿಗಿಂತ ಅಕ್ಕ ಐಶ್ವರ್ಯ ಶೆಟ್ಟಿ ಎರಡು ವರ್ಷ ದೊಡ್ಡವರು.

ಹಿಂದಿ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಸೌಂದರ್ಯ ಅವರಿಂದ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ರೋಚಕ ಆಟವನ್ನು ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ. ಈ ನಡುವೆ, ಶೋನಲ್ಲಿಆಪ್ತ ಸ್ನೇಹಿತ (ಬೆಸ್ಟಿ) ಎನಿಸಿಕೊಂಡಿರುವ ಯಶಸ್‌ ಜೊತೆ ನಡೆಸಿದ ಮದುವೆ ಕುರಿತಾದ ಸಂಭಾಷಣೆ ಈಗ ಪ್ರೇಕ್ಷಕರ ಗಮನ ಸೆಳೆದಿದೆ.

ಸಂಭಾಷಣೆಯ ವೇಳೆ ಸೌಂದರ್ಯ, “ನಾನು ಮದುವೆಯಾಗಬಹುದೇ?” ಎಂದು ಯಶಸ್‌ ಬಳಿ ಕೇಳಿದ್ದಾರೆ. ಇದಕ್ಕೆ ಆಶ್ಚರ್ಯಪಟ್ಟ ಯಶಸ್‌, “ಸಡನ್ ಆಗಿ ಮದುವೆ ನೆನಪಾಯಿತೇ?” ಎಂದು ಮರುಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸೌಂದರ್ಯ, “ನನಗೆ ಇದುವರೆಗೆ ಮದುವೆ ಆಲೋಚನೆಯೇ ಬಂದಿರಲಿಲ್ಲ. ಮನೆಯಲ್ಲೂ ಯಾರೂ ಒತ್ತಾಯ ಮಾಡುತ್ತಿಲ್ಲ, ಆದ್ರೆ ಅಕ್ಕ ಮಾತ್ರ ಮದುವೆಯಾಗುವಂತೆ ಪೀಡಿಸುತ್ತಿರುತ್ತಾಳೆ. ನಮ್ಮಮ್ಮನಿಗೆ ಗಂಡುಮಕ್ಕಳೆಂದರೆ ತುಂಬಾ ಪ್ರೀತಿ,” ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಇದೇ ವೇಳೆ ತಮ್ಮ ಹಳೆಯ ಪ್ರೇಮ ಕಥೆಯನ್ನು ನೆನಪಿಸಿಕೊಂಡ ಸೌಂದರ್ಯ, ‘ಸ್ಪ್ಲಿಟ್ಸ್‌ವಿಲ್ಲಾ’ ಶೋನಲ್ಲಿ ಹಂಚಿಕೊಂಡಿದ್ದ ಬ್ರೇಕಪ್ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. 4 ವರ್ಷಗಳ ಕಾಲ ತೀವ್ರವಾಗಿ ಪ್ರೀತಿಸಿದ್ದ ವ್ಯಕ್ತಿಯಿಂದ ದೂರವಾದ ಕಹಿ ಅನುಭವವನ್ನು ಈ ಹಿಂದೆ ಹಂಚಿಕೊಂಡಿದ್ದರು. ಸದ್ಯ ಮದುವೆ ಆಲೋಚನೆ ಇಲ್ಲದಿದ್ದರೂ, ಬಿಗ್‌ ಬಾಸ್ ಮನೆಯಲ್ಲಿ ಸೌಂದರ್ಯ ಆಡಿದ ಈ ಸರಸ-ಸಲ್ಲಾಪದ ಮಾತುಗಳು ವೀಕ್ಷಕರಿಗೆ ತಮಾಷೆಯ ಹಾಗೂ ಕುತೂಹಲದ ಅನುಭವ ನೀಡುತ್ತಿವೆ.