SK Home Ad
Home ಸಿನಿ ಮಿಲ್ಸ್ ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಧಮಾಕ: 6 ದಿನಗಳಲ್ಲಿ ರೂ.5.37 ಕೋಟಿ ಗಳಿಸಿ ದಾಖಲೆ!

ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ ಧಮಾಕ: 6 ದಿನಗಳಲ್ಲಿ ರೂ.5.37 ಕೋಟಿ ಗಳಿಸಿ ದಾಖಲೆ!

0
10

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಬಲವಾದ ಕಥಾಹಂದರ ಹಾಗೂ ಕಲಾವಿದರ ಸಹಜ ಅಭಿನಯದ ಬಲದೊಂದಿಗೆ ತೆರೆಗೆ ಬಂದಿರುವ ‘ಪ್ರೇಮದ ಊರಲಿ’ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಸಚೇತನ ಪ್ರದರ್ಶನ ಕಾಣುತ್ತಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರವು ಬಿಡುಗಡೆಯಾದ ಆರು ದಿನಗಳಲ್ಲಿ ಜಾಗತಿಕವಾಗಿ ರೂ.5.37 ಕೋಟಿ ಗ್ರಾಸ್ ಹಾಗೂ ರೂ.4.80 ಕೋಟಿ ನೆಟ್ ಸಂಗ್ರಹಿಸಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ.

ಬಿಡುಗಡೆಯಾದ ಮೊದಲ ದಿನ ಕೇವಲ 60 ಪ್ರದರ್ಶನಗಳಿಂದ ರೂ.13 ಲಕ್ಷ ಗಳಿಸಿ ಮಂದಗತಿಯಲ್ಲಿ ಖಾತೆ ತೆರೆದಿದ್ದ ಈ ಸಿನಿಮಾ, ನಂತರದ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಯಿಂದಾಗಿ ಅಚ್ಚರಿಯ ಚೇತರಿಕೆ ಕಂಡಿದೆ. ಶನಿವಾರ ರೂ.33 ಲಕ್ಷ ಹಾಗೂ ಭಾನುವಾರ ರೂ.81 ಲಕ್ಷ ಕಲೆಕ್ಷನ್ ಮಾಡಿದ್ದ ಚಿತ್ರ, ವಾರದ ದಿನಗಳಾದ ಸೋಮವಾರ ರೂ.95 ಲಕ್ಷ ಮತ್ತು ಮಂಗಳವಾರ ರೂ.1.41 ಕೋಟಿ ಬಾಚಿಕೊಂಡಿತ್ತು. ಇನ್ನು 6ನೇ ದಿನವಾದ ಬುಧವಾರ ತನ್ನ ಅತ್ಯಧಿಕ ದೈನಂದಿನ ಗಳಿಕೆಯಾಗಿ ರೂ.1.74 ಕೋಟಿ ಸಂಗ್ರಹಿಸಿ ಮೇಲುಗೈ ಸಾಧಿಸಿದೆ.

ಇದುವರೆಗೆ ಒಟ್ಟು 1,217 ಪ್ರದರ್ಶನಗಳನ್ನು ಪೂರೈಸಿರುವ ಈ ಚಿತ್ರದ ಪ್ರದರ್ಶನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿತ್ರತಂಡಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿದೆ. ಉತ್ತಮ ಮೌಖಿಕ ಪ್ರಚಾರ (Word of Mouth) ಸಿಗುತ್ತಿರುವುದರಿಂದ ಮುಂಬರುವ ರಜಾದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಜಿಗಿತ ಕಾಣಲಿದೆ ಎಂದು ಅಂದಾಜಿಸಿದ್ದಾರೆ. ಉತ್ತಮ ವಿಷಯವಿದ್ದರೆ ಸಣ್ಣ ಬಜೆಟ್ ಸಿನಿಮಾಗಳು ಸಹ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಬಲ್ಲವು ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ.

ಒಟ್ಟಾರೆಯಾಗಿ.. ಪ್ರೇಮದ ಊರಲ್ಲಿ ನೋಡಿದ ಪ್ರತೀ ಒಬ್ಬ ಅಭಿಮಾನಿಯೂ ಸಿನಿಮಾದ ಕುರಿತು ಸಂತಸವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹಾಗೇ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಸದ್ದು ಮಾಡುತ್ತಿರುವುದಂತು ಅಕ್ಷರಸಹ ನೋಡುಗರನ್ನ ಮೌನಮುಗ್ದಗೊಳಿಸುತ್ತಿದೆ.