SK Home Ad
Home ಸಿನಿ ಮಿಲ್ಸ್ 30 ಅಡಿ ಹೂಗುಚ್ಛ,₹9 ಲಕ್ಷ ವೆಚ್ಚ: ಸಿನಿಮಿಯ ರೀತಿ ಪ್ರಪೋಸಲ್; ಸಾಮಾಜಿಕ ಜಾಲತಾಣದಲ್ಲಿವಿಡಿಯೋ ವೈರಲ್

30 ಅಡಿ ಹೂಗುಚ್ಛ,₹9 ಲಕ್ಷ ವೆಚ್ಚ: ಸಿನಿಮಿಯ ರೀತಿ ಪ್ರಪೋಸಲ್; ಸಾಮಾಜಿಕ ಜಾಲತಾಣದಲ್ಲಿವಿಡಿಯೋ ವೈರಲ್

0
104


ಇತ್ತಿಚಿಗೆ ಜನರು ತಮ್ಮ ನೆಚ್ಚಿನವರನ್ನ ಇಂಪ್ರೇಸ್ ಮಾಡಲು ಏನೆನೊ ಹರಸಾಹಸ ಮಾಡುತ್ತಲೆ ಇರುತ್ತಾರೆ. ಆದ್ರೆ ಇಲ್ಲಿ ಒಬ್ಬ ತನ್ನ ಪ್ರೆಯಸಿಯನ್ನ ಒಲಿಸೊಕೆ ಗಿನ್ನಿಸ್ ದಾಖಲೆಯನ್ನೆ ಬರೆದಿದ್ದಾನೆ. ಇಂತಹ ಸಾಹಸಮಯ ಕೆಲಸದಿಂದ ಸದ್ಯಕ್ಕೆ ಈ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇಲ್ಲಿದೆ ಡಿಟೇಲ್ಸ್…..
ಪ್ರೀತಿಸಿದ ಹುಡುಗಿಗೆ ಸಪ್ರೈಸಿಂಗ್ ಪ್ರಪೋಸ್ ಮಾಡಲು ಖ್ಯಾತ್ ಯಟ್ಯೂಬ್ ವ್ಲಾಗರ್ ಸ್ಯಾಮ್ ಸಮೀರ್ ಎಂಬಾತ ಬರೋಬ್ಬರಿ 30 ಅಡಿ ಉದ್ದದ ಬೃಹತ್ ಹೂಗುಚ್ಚವನ್ನು ಎಲ್ಲಾ ಹೂಗಚ್ಚು ಸೇರಿಸಿ 20 ಸಾವಿರ ಗುಲಾಬಿ ಹೂ ಅದರ ಜೊತೆಗೆ ಕೃಶಾಂತಂ ಹೂ ಕೊಲ್ಕತ್ತಾದಿಂದ ತರಿಸಿ, ಕೇವಲ ಒಂದೆ ದಿನದಲ್ಲಿ ಸಿದ್ಧಪಡಿಸಿಲಾದ ಬರೊಬ್ಬರಿ 9 ಲಕ್ಷ ರೂ. ಹೂಗುಚ್ಚದಿಂದ (flower bouquet) ಪ್ರಪೋಸ್ ಮಾಡಿದ್ದಾನೆ.
ಸಾಮಾನ್ಯ ಪ್ರಪೋಸಲ್ಗಿಂತ ವಿಭಿನ್ನವಾಗಿ, ಸ್ಯಾಮ್ ಸಮೀರ್ ವಿಶೇಷ ಥೀಮ್ನೊಂದಿಗೆ ಕಾರ್ಯಕ್ರಮವನ್ನು ಸಿನಿಮೀಯ ಶೈಲಿಯಲ್ಲಿ ಆಯೋಜಿದ್ದು, ಬೃಹತ್ ಹೂಗುಚ್ಛವೇ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಪ್ರಪೋಸಲ್ನ ದೃಶ್ಯಗಳನ್ನು ಸಿನಿಮಾದ ದೃಶ್ಯದಂತೆ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಮೀಲಿಯನಷ್ಟು ಗಮನ ಸೆಳೆದಿದೆ. ನೇಹಾ ಗುಪ್ತಾ ಅವರಿಗೆ ಸ್ಯಾಮ್ ಸಮೀರ್ ನೀಡಿದ ಈ ಸರ್ಪ್ರೈಸ್ ಪ್ರಪೋಸ್ ಮೂಲಕ ಪ್ರೇಯಸಿ ನೇಹಾ, ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಹ ಫೀದಾ ಆಗಿದ್ದಾರೆ. ಹಾಗೆ ಅವರು ಹಂಚಿಕೋಂಡಿರುವ ವಿಡಿಯೋಗೆ ನೋಡುಗರು ಮೆಚ್ಚುಗೆಯ ಸುರಿಮಳೆಯನ್ನು ಸುರಿಸುತ್ತಿದ್ದಾರೆ.

-ಸಾರಿಕಾ ಈ ಪೂಜಾರಿ