SK Home Ad
Home ನಮ್ಮ ಜಿಲ್ಲೆ ವಿಜಯಪುರ ರೈತರ ಹೆಸರಲ್ಲಿ ಕಾರ್ಖಾನೆಗೆ 11 ಕೋಟಿ ವಂಚನೆ: 7 ಸಿಬ್ಬಂದಿ ಬಂಧನ

ರೈತರ ಹೆಸರಲ್ಲಿ ಕಾರ್ಖಾನೆಗೆ 11 ಕೋಟಿ ವಂಚನೆ: 7 ಸಿಬ್ಬಂದಿ ಬಂಧನ

0
94

ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಬೋಗಸ್ ರಸೀದಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಬೃಹತ್ ಜಾಲವನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಧಿಸಿದ್ದು, 7 ಜನರನ್ನು ಬಂಧಿಸಿದ್ದಾರೆ.

ಕಬ್ಬು ತೂಕದ ವಿಭಾಗದಲ್ಲಿದ್ದ ಧರೆಪ್ಪ ನಾವಿ, ಭೀರಪ್ಪ ಗಾಡದಾರ, ಯಲ್ಲಪ್ಪ ಗಾಡದರ, ಪ್ರಕಾಶ ಗಡ್ಡಿ, ಪರಮಾನಂದ ಗಡ್ಡಿ, ಮಹಾದೇವ ಕಾಂಬಳೆ ಉರ್ಫ್ ಸಿಂಗೆ, ಬಾಳಪ್ಪ ಚೋಪಡೆ ಹಾಗೂ ಪ್ರಭಾಕರ ಸಿಂಗೆ ಬಂಧಿತರಾಗಿದ್ದಾರೆ. ಬಂಧಿತರಿಂದ 11,32,07,569 ರೂ. ಹಣವನ್ನು ಯಶಸ್ವಿಯಾಗಿ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಆರೋಪಿಗಳು 2020-21 ರಿಂದ 2025-26ರ ಅವಧಿಯಲ್ಲಿ ಒಟ್ಟು 34,490 ಮೆಟ್ರಿಕ್ ಟನ್ ಕಬ್ಬ ನಕಲಿ ತೂಕ ತೋರಿಸಿ, 12.33 ಕೋಟಿ ಹಣವನ್ನು ತಮಗೆ ಬೇಕಾದವರ 91 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಪೊಲೀಸರು ಆರೋಪಿಗಳಿಂದ 21 ಲಕ್ಷ ನಗದು ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಮೊತ್ತವನ್ನು ಜಪ್ತು ಹಾಗೂ ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.