SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ

ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ

0
426

ಉತ್ತರ ಕನ್ನಡ (ದಾಂಡೇಲಿ): ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ, ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕುಮಟಾದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು‌, ದಲಿತ ಸಿಎಂ ವಿಚಾರ ಕುರಿತು ಚರ್ಚೆ ಎಲ್ಲಾ ಕಡೆ ನಡೆಯುತ್ತದೆ. ಚರ್ಚೆ ಆದ ತಕ್ಷಣ ಸಿಎಂ ಮಾಡಲು ಆಗುವುದಿಲ್ಲ. ಸಿಎಂ ಆಕಾಂಕ್ಷಿಗಳು ನಮ್ಮ ಪಕ್ಷದಲ್ಲಿ ಹಲವು ಜನ ಇದ್ದಾರೆ. ಆದರೆ ಅಂತಿಮವಾಗಿ ಹೈಕಮಾಂಡ್ ಈ ವಿಚಾರದಲ್ಲಿ ನಿರ್ಧಾರಕ್ಕೆ ಬರುತ್ತದೆ. ಈಗ ಮುಖ್ಯಮಂತ್ರಿ ಅವರನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ ಎಂದರು.

ಈಗ ಎದ್ದಿರುವ ಗೊಂದಲ‌ ನಿವಾರಣೆಗೆ ಬ್ರೇಕ್ ಹಾಕಬೇಕಾಗಿದೆ. ಶಾಸಕರು ವಿದೇಶ ಪ್ರವಾಸ ಹೋಗುವುದು ಸಹಜ. ಮುಖ್ಯಮಂತ್ರಿ ಹುದ್ದೆ ಗೊಂದಲಕ್ಕೂ, ವಿದೇಶ ಪ್ರವಾಸಕ್ಕೂ ಸಂಬಂಧವಿಲ್ಲ ಎಂದು ಹೇಳಿದರು‌.

ಇದನ್ನೂ ಓದಿ: ಹಂಪಿ ಕನ್ನಡ ವಿಶ್ವವಿದ್ಯಾಲಯ: 3 ಜನ ಸಾದಕರಿಗೆ ನಾಡೋಜ ಪ್ರಕಟ

ಪಕ್ಷದಲ್ಲಿ ನಾವ್ಯಾರು ಸಿಎಂ ಹುದ್ದೆ ರೇಸ್‌ನಲ್ಲಿ ಇಲ್ಲ. ಹಾಗಾಗಿ ನಾನು ಈಗ ಆರಾಮಾಗಿ ರಾಜ್ಯ ತಿರುಗುತ್ತಿದ್ದೇವೆ. ಇಲಾಖೆಯ ಕೆಲಸ ನೋಡುತ್ತಿದ್ದೇನೆ. ಬಿಜೆಪಿಯವರು ಬೇರೆಯವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು‌. ಈಗ ಅವರ ಎಂಎಲ್ಎ ಚಂದ್ರು ಲಮಾಣಿ ಶಿರಹಟ್ಟಿ ಅವರೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಜೆಪಿಯವರೇ ತಮ್ಮ ಭ್ರಷ್ಟಾಚಾರದ ಸಾಕ್ಷಿಯನ್ನ ಕೊಟ್ಟಿದ್ದಾರೆ ಎಂದರು‌.