Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ಎಚ್‌. ವಿಶ್ವನಾಥ್‌ಗೆ ವಯಸ್ಸಾಗಿದೆ, ಕ್ಷಮಿಸಿಬಿಡೋಣ

ಎಚ್‌. ವಿಶ್ವನಾಥ್‌ಗೆ ವಯಸ್ಸಾಗಿದೆ, ಕ್ಷಮಿಸಿಬಿಡೋಣ

0
29

ಶಿವಮೊಗ್ಗ: ವಿಶ್ವನಾಥ್ ಅವರು ಹಿರಿಯರು, ಅವರಿಗೆ ವಯಸ್ಸಾಗಿದೆ. ಹೀಗಾಗಿ ಏನೆನೋ ಹೇಳುತ್ತಾರೆ. ಆದರೆ ಆ ವಯಸ್ಸಿಗೆ ಗೌರವ ಕೊಟ್ಟು ಅವರನ್ನು ಕ್ಷಮಿಸಿ ಬಿಡೋಣ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಸ್ಸೆಸ್ಸೆಲ್ಸಿ ಫಲಿತಾಂಶದ ಕುರಿತು ಹಗುರವಾಗಿ ಮಾತನಾಡಿರುವ ಹಿರಿಯ ನಾಯಕ ಎಚ್. ವಿಶ್ವನಾಥ್ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಉತ್ತರ ನೀಡಿದರು.

ಮಕ್ಕಳ ಫಲಿತಾಂಶವನ್ನು ಕಾಪಿ ಹೊಡೆದು ಪಾಸಾಗಿದ್ದಾರೆ ಎಂದು ಹೇಳಿರುವುದು ಅತ್ಯಂತ ದುರದೃಷ್ಟಕರ, ಇದು ಕೇವಲ ಮಕ್ಕಳಿಗೆ ಮಾಡಿದ ಅವಮಾನವಲ್ಲ. ದೇಶದ ಭವಿಷ್ಯಕ್ಕೆ ಮಾಡಿದ ಅವಮಾನ. ಲಕ್ಷಾಂತರ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿ ಫಲಿತಾಂಶ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಮಕ್ಕಳ ಸಾಧನೆಯನ್ನು ಇಷ್ಟು ಕೀಳಾಗಿ ಕಾಣುವುದು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಮಾಡುವ ಅವಮಾನ. ವಿಶ್ವನಾಥ್ ಅವರ ಇಂತಹ ಹೇಳಿಕೆಗಳಿಂದ ಮಕ್ಕಳ ಮನಸ್ಸಿಗೆ ನೋವಾಗುತ್ತದೆ. ಅವರು ಮಾಡಿರುವ ಟೀಕೆಗಳಿಗೆ ಆ ಮಕ್ಕಳು ಸಾಧನೆಯ ಮೂಲಕವೇ ಉತ್ತರ ನೀಡಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿ ಅವರು ತಮ್ಮ ಕಾಲದಲ್ಲಿ ಶಿಕ್ಷಣ ಇಲಾಖೆ ಎದುರಿಸುತ್ತಿದ್ದ ಗೊಂದಲಗಳು ಮತ್ತು ಈಗಿನ ಸುಧಾರಣೆಗಳನ್ನು ಗಮನಿಸಬೇಕು. ರಾಜಕೀಯ ಮಾಡುವುದಕ್ಕಾಗಿಯೇ ಟೀಕೆ ಮಾಡಬಾರದು. ಟೀಕೆ ಮಾಡುವವರು ನಮ್ಮ ಶಾಲೆಗಳಿಗೆ ಬಂದು ಸೇರಿಕೊಳ್ಳಲಿ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆಯೂ ಹಗುರವಾಗಿ ಮಾತನಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಲಬುರ್ಗಿ ಜಿಲ್ಲೆಯ ಫಲಿತಾಂಶ ಉತ್ತಮವಾಗಿದೆ. ಸಿಇಟಿ ಫಲಿತಾಂಶದ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದರು.