ಮೈಸೂರು: ನಟ ರಣವೀರ್ ಸಿಂಗ್ ಅವರು ಮಂಗಳವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡಿ ತಾಯಿ ದರ್ಶನ ಪಡೆದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಹಿಂದೆ ನಡೆದಿದ್ದ ಅವಹೇಳನಕಾರಿ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಅವರು ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆಯಾಚನೆ ಸಲ್ಲಿಸಿದರೆಂದು ತಿಳಿದುಬಂದಿದೆ.
ರಣವೀರ್ ಸಿಂಗ್ ಅವರು ದೇವಿಯ ದರ್ಶನ ಪಡೆದು ಗರ್ಭಗುಡಿಯ ಆವರಣದಲ್ಲಿ ಕೆಲಕಾಲ ಕುಳಿತು ಪ್ರಾರ್ಥನೆ ನಡೆಸಿದರು. ಅಲ್ಲದೆ ಮೂಲ ವಿಗ್ರಹ ಹಾಗೂ ಉತ್ಸವಮೂರ್ತಿಯ ಸಮೀಪ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಯಾವುದೇ ಮಾಹಿತಿ ನೀಡದೇ ಸಾಮಾನ್ಯ ಭಕ್ತರಂತೆ ದೇವಾಲಯಕ್ಕೆ ಆಗಮಿಸಿದ್ದರಿಂದ ಆರಂಭದಲ್ಲಿ ಹಲವರಿಗೆ ಅವರ ಆಗಮನದ ಬಗ್ಗೆ ತಿಳಿದಿರಲಿಲ್ಲ. ಬಳಿಕ ಕೆಲ ಭಕ್ತರು ಗುರುತಿಸಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದರು.
ದೇವಾಲಯ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ಪೂಜಾ ವಿಧಿಗಳು ನಡೆದಿದ್ದು, ಭೇಟಿ ವೇಳೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು.






















