SK Home Ad
Home ನಮ್ಮ ಜಿಲ್ಲೆ ಸತ್ಯಾತ್ಮತೀರ್ಥರ ಆರೋಗ್ಯ ವಿಚಾರಿಸಿದ ಮಂತ್ರಾಲಯ ಶ್ರೀಗಳು

ಸತ್ಯಾತ್ಮತೀರ್ಥರ ಆರೋಗ್ಯ ವಿಚಾರಿಸಿದ ಮಂತ್ರಾಲಯ ಶ್ರೀಗಳು

0
46

ಹುಬ್ಬಳ್ಳಿ: ಅಪಘಾತಕ್ಕೊಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತಾರಿದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ಮಂತ್ರಾಲಯದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಭಾನುವಾರ ಭೇಟಿಮಾಡಿ ಆರೋಗ್ಯ ವಿಚಾರಿಸಿದರು.

ಸುಮಾರು 15 ನಿಮಿಷಗಳ ಕಾಲ ಸತ್ಯಾತ್ಮತೀರ್ಥ ಶ್ರೀಗಳ ಉಭಯ ಕುಷಲೋಪರಿ ವಿಚಾರಿಸಿದ ಮಂತ್ರಾಯಲದ ಶ್ರೀಗಳು, ‘ಹರಿವಾಯು ಗುರುಗಳ ಆಶೀರ್ವಾದ ನಿಮ್ಮ ಮೇಲಿದೆ. ಸಮಸ್ಯೆ ಸಣ್ಣದರಲ್ಲೇ ಪರಿಹಾರವಾಗಿದೆ. ಆದಷ್ಟು ಬೇಗ ಚೇತರಿಸಿಕೊಳ್ಳಿ’ ಎಂದು ಸಮಾಧಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ವಿದ್ಯಾನಗರದಲ್ಲಿನ ಉತ್ತರಾದಿ ಮಠಕ್ಕೆ ಭೇಟಿ ನೀಡಿ, ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ತಂದೆ ರಂಗಾಚಾರ್ಯ ಗುತ್ತಲ ಹಾಗೂ ತಾಯಿ ರುಕ್ಮಿಣಿಬಾಯಿ (ವೈಜು ಮಾಮಿ) ಅವರನ್ನು ಭೇಟಿ ಮಾಡಿದರು.

ಅವೀರ್ವರಿಗೂ ಫಲ ಮಂತ್ರಾಕ್ಷತೆ ನೀಡಿ, ಗುರು ರಾಘವೇಂದ್ರ ಸ್ವಾಮಿಗಳ ಶೇಷವಸ್ತ್ರ ನೀಡಿ ʻಧೈರ್ಯಗೆಡಬೇಡಿ, ರಾಯರಿದ್ದಾರೆ. ಸತ್ಯಾತ್ಮತೀರ್ಥರು ಶೀಘ್ರವೇ ಗುಣಮುಖರಾಗುತ್ತಾರೆ’ ಎಂದು ಅಭಯ ನೀಡಿದ್ದಾರೆ.