SK Home Ad
Home ಸಿನಿ ಮಿಲ್ಸ್ ದರ್ಶನ್‌ಗೆ ಶಾಕ್: ಕೋರ್ಟ್‌ಗೆ ವೈಯಕ್ತಿಕ ಹಾಜರಾತಿ ಅರ್ಜಿ ವಜಾ

ದರ್ಶನ್‌ಗೆ ಶಾಕ್: ಕೋರ್ಟ್‌ಗೆ ವೈಯಕ್ತಿಕ ಹಾಜರಾತಿ ಅರ್ಜಿ ವಜಾ

0
21

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ವೈಯಕ್ತಿಕ ಹಾಜರಾತಿ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿ ಆದೇಶಿಸಿದೆ.

ಈ ಹಿಂದೆ ಅರ್ಜಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ನೇರವಾಗಿ ಹಾಜರುಪಡಿಸಬಾರದು ಎಂದು ವಿಶೇಷ ಸರ್ಕಾರಿ ಅಭಿಯೋಜಕರ ಪ್ರಸನ್ನ ಕುಮಾರ್ ಸೆಷನ್ಸ್ ಕೋರ್ಟ್‌ನಲ್ಲಿ ಬಲವಾಗಿ ವಾದಿಸಿದ್ದರು. ಈ ಹಿಂದಿನ ಘಟನೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದ ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್‌ನನ್ನು ಈ ಹಿಂದೆ ಕೋರ್ಟ್‌ಗೆ ಕರೆತಂದಾಗ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಡೀ ನ್ಯಾಯಾಲಯದ ಆವರಣ ಕಿಕ್ಕಿರಿದು ತುಂಬಿ, ಉಸಿರಾಡಲು ಕಷ್ಟವಾಗುವಂತಹ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿತ್ತು. ದೋಷಾರೋಪಣೆ ಪಟ್ಟಿ ಸಿದ್ಧಪಡಿಸುವ ದಿನ ಇಡೀ ಕೋರ್ಟ್ ಭರ್ತಿಯಾಗಿದ್ದರಿಂದ, ನ್ಯಾಯಾಧೀಶರು ಹೇಳುವ ಮಾತುಗಳು ಆರೋಪಿಗಳಿಗೆ ಕೇಳದಂತಹ ಪರಿಸ್ಥಿತಿ ಇತ್ತು. ಇದರಿಂದಾಗಿ ಅರ್ಧ ದಿನದ ಸಮಯ ವ್ಯರ್ಥವಾಗಿತ್ತು ಎಂದು ನೆನಪಿಸಿದ್ದರು.

ಪ್ರಸ್ತುತ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಭದ್ರತೆಯ ದೊಡ್ಡ ಸವಾಲಿದೆ ಎಂದು ವಾದಿಸಿದ ಪ್ರಸನ್ನ ಕುಮಾರ್, ಮುಂಬರುವ, ವರಮಹಾಲಕ್ಷ್ಮಿ ಹಬ್ಬ ಹಾಗೂ ಈದ್ ಮಿಲಾದ್‌ನಂತಹ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸರು ಇತರೆ ಭದ್ರತಾ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದರ್ಶನ್‌ನನ್ನು ಖುದ್ದು ಹಾಜರುಪಡಿಸಿದರೆ ಭದ್ರತೆ ಒದಗಿಸುವುದು ಕಷ್ಟಸಾಧ್ಯ. ಅಲ್ಲದೆ, ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಈ ಸೂಕ್ಷ್ಮ ಹಂತದಲ್ಲಿ ದರ್ಶನ್ ಕೋರ್ಟ್‌ಗೆ ಬಂದರೆ ಮತ್ತೆ ಜನಸ್ತೋಮ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ವಾದ ಮಂಡನೆ ಮಾಡಿದ್ದರು. ಪ್ರಸನ್ನ ಕುಮಾರ್ ಅವರ ಈ ವಾದವೇ ದರ್ಶನ್ ಅವರಿಗೆ ಮುಳ್ಳಾಗಿದೆ.