ಹುಬ್ಬಳ್ಳಿ: ತಂದೆ ಮಗನ ನಡುವೆ ನಡೆದ ಜಗಳದಲ್ಲಿ ಮಗನೇ ತಂದೆಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಗೋಪನಕೊಪ್ಪದ ಗವಿಸಿದ್ದೇಶ್ವರ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗವಿಸಿದ್ದೇಶ್ವರ ಕಾಲೋನಿಯ ನಿವಾಸಿ ಕಲ್ಲಪ್ಪ ಯಲ್ಲಪ್ಪ ಮೂಲಿಮನಿ (50) ಮೃತಪಟ್ಟವರು. ಮೃತನ ಪುತ್ರ ಮಹೇಶ ಕಲ್ಲಪ್ಪ ಮೂಲಿಮನಿ (24) ಹೊಡೆದು ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಮನೆಗೆ ಬಂದ ಮಗನಿಗೆ ಬೈದು ಒಂದು ಏಟು ಹೊಡೆದಿದ್ದಕ್ಕೆ ಬಡಿಗೆಯಿಂದ ಮುಖ ಹಾಗೂ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















